ಈರುಳ್ಳಿ ಚೀಲದಲ್ಲಿ ಸಿಕ್ಕಿದ್ದು 4.12 ಕೋಟಿ
ಬೆಂಗಳೂರು, ಜನವರಿ 31: ಕೇರಳ ಮೂಲದ ಮೂವರು ವ್ಯಕ್ತಿಗಳ ಚಲನ-ವಲನ ಅನುಮಾನಾಸ್ಪದವಾಗಿದೆ ಎಂಬ ದೂರು ಬಂದ ಕಾರಣಕ್ಕೆ ಬೆಂಗಳೂರು ಪೊಲೀಸರು ದಾಳಿ ನಡೆಸಿದಾಗ ಆಲೂಗಡ್ಡೆ, ಈರುಳ್ಳಿ ಮಧ್ಯೆ 4.12 ಕೋಟಿ ರುಪಾಯಿಯನ್ನು ಪತ್ತೆ ಹಚ್ಚಿದ್ದಾರೆ. ಮೊಹ್ಮದ್ ಅಫ್ಜಲ್, ಅಬ್ದುಲ್ ನಾಸರ್ ಮತ್ತು ಶಂಶುದ್ದೀನ್ ಬಂಧಿತರು. ಈ ಮೂವರು ಕೇರಳ ಮೂಲದವರು. ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಮಿನಿ ಲಾರಿಯಲ್ಲಿ ಅಕ್ರಮವಾಗಿ ಹೊಸ ನೋಟುಗಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಬಲೆಗೆ ಕೆಡವಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಸತಿ ಕಟ್ಟಡದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು
loading...
No comments