Breaking News

ಬಿಜೆಪಿ ಜಿಲ್ಲಾ ಘಟಕಗಳ ಪುನರ್ರಚನೆ ?


ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಕ್ಷದ ಜಿಲ್ಲಾ ಘಟಕಗಳ ಪದಾಧಿಕಾರಿ ಆಯ್ಕೆ ಸಂದರ್ಭದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆಂಬ ಈಶ್ವರಪ್ಪರ ಆರೋಪವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಮನಕ್ಕೆ ತೆಗೆದುಕೊಂಡಿದ್ದು ಜಿಲ್ಲಾ ಘಟಕಗಳ ಪುನರ್ರಚಿಸಬೇಕೆಂದು ಮಾಜಿ ಸೀಎಂಗೆ ಫರ್ಮಾನು ಕೊಟ್ಟಿದ್ದಾರೆ.

ಯಡಿಯೂರಪ್ಪರು ತಮ್ಮ ಪಾಳಯದವರನ್ನೇ ಜಿಲ್ಲಾ ಘಟಕಗಳಿಗೆ ನೇಮಿಸಿದ್ದಾರೆಂದು ದಿಲ್ಲಿಯಲ್ಲಿ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ದೂರಿದ್ದರು.

ಜಿಲ್ಲಾ ಘಟಕಗಳ ಕಾರ್ಯನಿರ್ವಹಣೆಯನ್ನು ಪರಾಮರ್ಶಿಸಿ, ಅಗತ್ಯವಿದ್ದಲ್ಲಿ ಘಟಕಗಳ ಪುನರ್ರಚನೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಮುರಳೀಧರ ರಾವ್ ಅಧ್ಯಕ್ಷತೆಯಲ್ಲಿ ಸಮಿತಿಯೊನ್ನು ರಚಿಸಿದ್ದಾರೆ 
-karavali ale

loading...

No comments