ಈ BSNL ಕಚೇರಿಯಲ್ಲಿ ಕೆಲಸ ಆರಂಭಿಸುವ ಮುನ್ನ ರಾಷ್ಟ್ರಗೀತೆ ಹಾಡ್ತಾರೆ ?
ದೇಶಾದ್ಯಂತ ಸಿನಿಮಾ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮುನ್ನ ರಾಷ್ಟ್ರಗೀತೆ ಹಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸುಪ್ರೀಂ ಆದೇಶದಂತೆ ಚಿತ್ರ ಪ್ರಸಾರಕ್ಕೂ ಮುನ್ನ ಚಿತ್ರಮಂದಿರದ ಸ್ಕೀನ್‍ಗಳಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿದೆ, ಈ ವೇಳೆ ಪ್ರೇಕ್ಷಕರು ಎದ್ದು ನಿಂತು ರಾಷ್ಟ್ರಗೀತೆ ಗೌರವ ಸಲ್ಲಿಸುತ್ತಾರೆ. ಈಗ ಅಗರ್ತಲಾನ ಸಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಚೇರಿಯು ತನ್ನ ಉದ್ಯೋಗಿಗಳು ಬೆಳಿಗ್ಗೆ ಕೆಲಸ ಮಾಡುವ ಮುನ್ನ ರಾಷ್ಟ್ರಗೀತೆ ಹಾಡಿದ ಬಳಿಕ ಕೆಲಸಕ್ಕೆ ಹಾಜರಾಗುತ್ತಾರೆ.
ಮಧ್ಯಪ್ರದೇಶದ ಝಬಲ್‍ಪುರ ಮತ್ತು ಉತ್ತರ ಪ್ರದೇಶದ ಗಾಜಿಯಾಬದ್‍ನ ಬಿಎಸ್‍ಎನ್‍ಎಲ್ ತರಬೇತಿ ಕೇಂದ್ರದಲ್ಲಿ ಬಿಎಸ್‍ಎನ್‍ಎಲ್ ಉದ್ಯೋಗಿಗಳು ಪ್ರತಿದಿನ ರಾಷ್ಟ್ರಗೀತೆ ಹಾಡುತ್ತಿದ್ದರು. ಈ ನಿಯಮವನ್ನು ಮೊಟ್ಟ ಮೊದಲ ಬಾರಿಗೆ ಅಗರ್ತಾಲದಲ್ಲಿ ಜಾರಿಗೆ ತಂದಿದ್ದೇವೆ ಎಂದು ತ್ರಿಪುರ ಬಿಎಸ್‍ಎನ್‍ಎಲ್ ಮುಖ್ಯ ಲೆಕ್ಕಾಧಿಕಾರಿ ಅಶೀಮ್ ಭಟ್ಟಾಚಾರ್ಯ ತಿಳಿಸಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಡಿ ಗುಂಪಿನ ನೌಕರರು ಹಾಗೂ ಮ್ಯಾನೇಜರ್ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ಸಲ್ಲಿಸಿ ಕೆಲಸಕ್ಕೆ ಹಾಜರಾದರು. ಕಳೆದ ದಿನದಷ್ಟೇ ನಡೆದ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಈ ನಿಯಮವನ್ನು ಜಾರಿಗೆ ತರುಬೇಕೆಂದು ತೀರ್ಮಾನ ಕೈಗೊಳ್ಳಲಾಗಿದ್ದು ಪ್ರತಿದಿನ ಬೆಳಿಗ್ಗೆ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರಗೀತೆ ಹಾಡಲು ತೀರ್ಮಾನಿಸಲಾಗಿದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
loading...
No comments