ಬೆಂಗಳೂರಿನ ಬಗ್ಗೆ ಅಪಪ್ರಚಾರ ಮಾಡಿದ ಡೇವಿಡ್ ಗ್ವೆಟ್ಟಾ ಕಾರ್ಯಕ್ರಮ ಮುಂಬೈನಲ್ಲೂ ರದ್ದು
ನವದೆಹಲಿ : ಫ್ರೆಂಚ್ ಡಿಜೆ ಡೇವಿಡ್ ಗ್ವೆಟ್ಟಾ ಅವರ ಕಾರ್ಯಕ್ರಮಕ್ಕೆ ಮುನಿಸಿಪಾಲಿಟಿ ಕಾರ್ಪೋರೇಷನ್ ಅನುಮತಿ ನೀಡಲು ನಿರಾಕರಿಸಿದೆ .ಮುಂಬೈ ಪೊಲೀಸರ ಪ್ರಕಾರ, ಅನುಮತಿ ಕುರಿತಂತೆ, ಸಂಘಟಕರು ಸಂಪೂರ್ಣ ವಿವರ ನೀಡಿಲ್ಲ ಎಂಬ ಕಾರಣಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ .
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಎಪಿಎಂಸಿ ಚುನಾವಣೆ ಕಾರಣದಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಫ್ರೆಂಚ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು ಈ ಬಗ್ಗೆ ಸಂಘಟನಾ ಕಾರರು ಸಾಮಾಜಿಕ ಜಾಲ ತಾಣದಲ್ಲಿ ಅಪಪ್ರಚಾರ ಮಾಡಿ ಹೊಸ ವರ್ಷದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಾರ್ಯಕ್ರಮ ರದ್ದು ಗೊಳಿಸಲಾಗಿದೆ ಎಂದು ಹೇಳಿ ಬೆಂಗಳೂರಿಗೆ ಮಸಿ ಬಳಿಯಲು ಹೊರಟಿದ್ದರು ಈ ಬಗ್ಗೆ ಇದೀಗ ಬೆಂಗಳೂರು ಪೊಲೀಸರು ಕೂಡ ಕಾರ್ಯಕ್ರಮದ ಸಂಘಟನಾಕಾರರಿಗೆ ನೋಟೀಸ್ ನೀಡಿ ಮಾಹಿತಿ ನೀಡುವಂತೆ ಕೋರಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ .
loading...
No comments