ಜನ್‍ಧನ್ ಖಾತೆ ಹೊಂದಿದವರಿಗೆ ಶುಭ ಸುದ್ದಿ ನೀಡಲಿರುವ ಮೋದಿ
ನವದೆಹಲಿ: ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿ ಕಪ್ಪು ಹಣದ ವಿರುದ್ಧ ಸಮಾರ ಸಾರಿದ ಮೋದಿ ಸರ್ಕಾರ ಇದೀಗ ಪ್ರಧಾನಿ ನರೇಂದ್ರ ಮೋದಿ ಹಲವು ಬದಲಾವಣೆ ತರಲು ಮುಂದಾಗಿದ್ದು, ಈಗ ಜನ್‍ಧನ್ ಖಾತೆದಾರರಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ಜನ್‍ಧನ್ ಖಾತೆ ಹೊಂದಿರುವವರಿಗೆ ಮೂರು ವರ್ಷಗಳವರೆಗೂ 2 ಲಕ್ಷ ರೂ. ವಿಮೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ. ದೇಶಾದ್ಯಂತ 27 ಕೋಟಿ ಜನರು ಜನ್‍ಧನ್ ಖಾತೆ ಹೊಂದಿದ್ದು, ಮೊದಲ ಮೂರು ವರ್ಷ ವಿಮೆ ಕಂತು ಪಾವತಿಸಲು ಸರ್ಕಾರ ಸಿದ್ಧವಾಗಿದೆ ಎನ್ನಲಾಗುತ್ತಿದ್ದು, ಈ ಯೋಜನೆ ಜಾರಿಗೆ ಬಂದರೆ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ. ಒಂದು ವೇಳೆ ಈ ಆದೇಶ ಹೊರ ಬಿದ್ದರೆ ದೇಶದ ಬಡ ಜನರಿಗೆ ಬಹಳ ಉಪಯೋಗವಾಗಲಿದೆ
loading...
No comments