Breaking News

2000 ರೂ ಬೆಲೆಯ ನಕಲಿ ನೋಟು ಮುದ್ರಿಸುತ್ತಿರುವ ಪಾಕಿಸ್ತಾನ


ನವದೆಹಲಿ : ಉಗ್ರಗಾಮಿ ಚಟುವಟಿಕೆ ಮತ್ತು ಕಪ್ಪು ಹಣದ ಮೇಲೆ ಸಮರ ಸಾರಿ  500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಮೋದಿ ಸರ್ಕಾರಕ್ಕೆ ಇದೀಗ  ಹೊಸ ತಲೆ ನೋವು ಶುರು ಆಗಿದೆ . 2000 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದ ಮೂರು ತಿಂಗಳ ಬಳಿಕ ಇದೀಗ ಪಾಕಿಸ್ತಾನದಿಂದ ಭಾರತದೊಳಕ್ಕೆ ೨ ಸಾವಿರ ಮುಖ ಬೆಲೆಯ ನಕಲಿ ನೋಟುಗಳು ಹರಿದು ಬರುತಿದೆ .

ನಕಲಿ ನೋಟು ಮುದ್ರಣವನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ಮೋದಿ ಎಷ್ಟೇ ಎಚ್ಚರಿಕೆಯಿಂದ ಕ್ರಮ ಕೈಗೊಂಡಿದ್ದರೂ ನಕಲಿ ನೋಟುಗಳನ್ನು ಮುದ್ರಿಸಿ ಪಾಕಿಸ್ತಾನ ಅದನ್ನು ಭಾರತಕ್ಕೆ ರವಾನಿಸುತ್ತಿದೆ. ಬಾಂಗ್ಲಾ ದೇಶದ ಗಡಿ ಮೂಲಕ ಈ ನಕಲಿ ನೋಟುಗಳು ಒಳಪ್ರವೇಶಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಕೆಲವೇ ದಿನಗಳ ಹಿಂದೆ ಕೆಲವರನ್ನು ಬಂಧಿಸಿದ್ದು, ಅವರಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಪಶ್ಚಿಮ ಬಂಗಾಳದ ಮಾಲ್ಡ ನಿವಾಸಿಯೊಬ್ಬನನ್ನು ಮುರ್ಶಿದಾಬಾದ್ ಎಂಬಲ್ಲಿ ಬಂಧಿಸಲಾಗಿದ್ದ ವೇಳೆ ಈತನಿಂದ 2000 ರೂ ಮುಖಬೆಲೆಯ 40 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಆರೋಪಿಯ ತನಿಖೆ ವೇಳೆ ಪಾಕಿಸ್ಥಾನದಲ್ಲಿ ಮುದ್ರಿತವಾಗಿರುವ ನಕಲಿ ನೋಟುಗಳನ್ನು ಐ ಎಸ್ ಐ ಏಜೆಂಟರ ನೆರವಿನಿಂದ ಭಾರತಕ್ಕೆ ಕೊಂಡುಹೋಗುವಂತೆ ಮಾಡಲಾಗುತ್ತಿದೆ ಎಂದು ಬಾಯ್ಬಿಟ್ಟಿದ್ದಾನೆ. ಈ ರೀತಿ ನಕಲಿ ನೋಟುಗಳನ್ನು ಕೊಂಡು ಹೋಗುವವರಿಗೆ 400ರಿಂದ 600 ರೂ ಹೆಚ್ಚುವರಿ ಹಣ ಪಾವತಿಸಲಾಗುತ್ತದೆ. ನಕಲಿ ನೋಟುಗಳಲ್ಲಿ 17ರಲ್ಲಿ 11 ಅಂಶಗಳನ್ನು ಪಾಕಿಸ್ಥಾನ ಕಂಡು ಹಿಡಿದು ನಕಲಿ ಮಾಡಿದೆ.


loading...

No comments