Breaking News

ಪಾಕಿಸ್ತಾನ ಕೊರೆದ 20 ಮೀಟರ್‌ ಉದ್ದದ ಸುರಂಗ ಪತ್ತೆ

ಕಾಶ್ಮೀರ : ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಉಗ್ರರು ನುಸುಳಲು ಪಾಕಿಸ್ತಾನದಕಡೆಯಿಂದ ಕೊರೆದಿರುವ ಸುರಂಗವನ್ನು ಭಾರತೀಯ ಗಡಿ ಭದ್ರತಾ ಪಡೆ ಪತ್ತೆ ಮಾಡಿದೆ.

ಭದ್ರತಾ ಪಡೆ ಉಗ್ರರ ನುಸುಳುವಿಕೆ ಮಾರ್ಗಗಳ ಪತ್ತೆ ಶೋಧದಲ್ಲಿ ತೊಡಗಿದ್ದಾಗ ಸೋಮವಾರ ರಾಮಗಢ ವಲಯದ ಗಡಿಯಲ್ಲಿನ ತಂತಿ ಬೇಲಿಯ ಕೆಳಗೆ 20 ಮೀಟರ್‌ ಉದ್ದದ ಸುರಂಗವನ್ನು ಪತ್ತೆ ಮಾಡಲಾಗಿದೆ ಎಂದು ಬಿಎಸ್‌ಎಫ್‌ನ ಡಿಐಜಿ ಧರ್ಮೇಂದ್ರ ಪರೀಖ್‌ ತಿಳಿಸಿದ್ದಾರೆ.

2.5 ಅಡಿ ಅಗಲ, 2.5 ಅಡಿ ಎತ್ತರ ವಿರುವ 20 ಅಡಿ ಉದ್ದದ ಸುರಂಗ ಇದಾಗಿದೆ. ಸುರಂಗ ಪತ್ತೆ ಮಾಡುವ ಮೂಲಕ ಗಡಿಯಲ್ಲಿ ಪಾಕಿಸ್ತಾನಿ ಉಗ್ರರು ನುಸುಳುವುದಕ್ಕೆ ತಡೆಯೊಡ್ಡಿದಂತಾಗಿದೆ. ಪಾಕಿಸ್ತಾನದ ಕಡೆಯಿಂದ ಈ ಸುರಂಗ ಕೊರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಸುರಂಗ ಇನ್ನೂ ಪೂರ್ಣಗೊಳ್ಳುವ ಮತ್ತು ಗಡಿಯಲ್ಲಿನ ಬೇಲಿಯನ್ನು ತಲುಪುವ ಮೊದಲೇ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
prajavani
loading...

No comments