Breaking News

ಫೆ 25ರಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ಮಂಗಳೂರಿಗೆ


ಮಂಗಳೂರು : ಸಿಪಿಎಂ ವತಿಯಿಂದ ಫೆ 25ರಂದು ನೆಹರೂ ಮೈದಾನದಲ್ಲಿ ಆಯೋಜಿಸಲಾಗಿರುವ ಕರಾವಳಿ ಸೌಹಾರ್ದ ರ್ಯಾಲಿ ಮತ್ತು ಸಮಾವೇಶದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಅಂದು ಮಧ್ಯಾಹ್ನ 2.30ಕ್ಕೆ  ಅಂಬೇಡ್ಕರ್ ಸರ್ಕಲ್ ಬಳಿಯಿಂದ ಸಾರ್ವಜನಿಕ ರ್ಯಾಲಿ ಹೊರಡಲಿದ್ದು, 3.30ಕ್ಕೆ ಕೇಂದ್ರ ಮೈದಾನದಲ್ಲಿ ಸಮಾಪನಗೊಳ್ಳಲಿದ್ದು, ಬಳಿಕ ಸಮಾವೇಶದ ಸಭಾ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಪ್ರಮುಖ ಭಾಷಣವನ್ನು ಪಿಣರಾಯಿ ವಿಜಯನ್ ನೀಡಲಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಪಿಣರಾಯಿ ಆಗಮನಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿದ ವಸಂತ ಆಚಾರಿ, ಪಿಣರಾಯಿ ಅವರ ಆಡಳಿತಾವಧಿಯಲ್ಲಿ ನಡೆದ ಕೋಮುಗಲಭೆಗಳಿಗಿಂತಲೂ ಹೆಚ್ಚಾಗಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ವಿತ್ವದಲ್ಲಿದ್ದಾಗ ಕೋಮುಗಲಭೆಗಳು ನಡೆದಿದ್ದವು ಎಂದು ಟೀಕಿಸಿದರು.
k ale

loading...

No comments