ಕರಾವಳಿಯಲ್ಲಿ ಸೌಹಾರ್ದ ಬೆಂಬಲಿಸಿ ಬೈಕ್ ರ್ಯಾಲಿ
ಮಂಗಳೂರು : ಸಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕರಾವಳಿ ಜಿಲ್ಲೆಗಳ ಐಕ್ಯತೆ ಹಾಗೂ ಶಾಂತಿಯನ್ನು ಭದ್ರಪಡಿಸಲು ಫೆ 25ರಂದು ನಗರದಲ್ಲಿ ನಡೆಯಲಿರುವ ಕರಾವಳಿ ಸೌಹಾರ್ದ ರ್ಯಾಲಿಯನ್ನು ಬೆಂಬಲಿಸಿ ಸಿಪಿಐ(ಎಂ) ಪಕ್ಷದ ಯುವ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಯಾದವ ಶೆಟ್ಟಿ ಮಾತನಾಡಿ, “ಕೆಲ ವರ್ಷಗಳಿಂದ ಕರಾವಳಿಯ ಹಿಂದುಳಿದ ವರ್ಗಗಳ ಯುವಕರು ಹಿಂದೂತ್ವದ ದುರ್ಬೋದನೆಗಳಿಗಾಗಿ ಅಲ್ಪಸಂಖ್ಯಾತರ ವಿರುದ್ಧ ಅನಗತ್ಯ ದಾಳಿ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಕ್ರಿಮಿನಲ್ಲುಗಳಾಗಿ ಪರಿವರ್ತಿತರಾಗಿದ್ದಾರೆ. ಪ್ರವೀಣ್ ಪೂಜಾರಿ, ಹರೀಶ್ ಪೂಜಾರಿ ಹತರಾಗಿದ್ದಾರೆ. ಇವರ ಬದುಕನ್ನು ನಾಶ ಮಾಡಿದವರು ಯಾರು” ಎಂದು ಪ್ರಶ್ನಿಸಿದರು.
“ಜನರಿಗೆ ಬೇಕಾದುದು ಆಹಾರ, ವಿದ್ಯೆ, ಆರೋಗ್ಯ, ಅಭಿವೃದ್ಧಿ. ಕೇರಳ ರಾಜ್ಯವೇ ಇವುಗಳಲ್ಲಿ ತಮಗೆ ಮಾದರಿಯೆಂದು ನಮ್ಮ ಜಿಲ್ಲೆಯ ಶಾಸಕರುಗಳೇ ಹೇಳುತ್ತಿದ್ದಾರೆ. ಕೇರಳದಲ್ಲಿ ದಾಂದಲೆ ನಡೆಸುವ ಸಂಘ ಪರಿವಾರದ ಶಕ್ತಿಗಳನ್ನು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಬಗ್ಗುಬಡಿದಿರುವ ಕಾರಣದಿಂದಾಗಿ, ಅಲ್ಲಿ ಅಲ್ಪಸಂಖ್ಯಾಕತರಿಗೆ ರಕ್ಷಣೆ ದೊರಕಿದೆ” ಎಂದರು.
kale
loading...
No comments