Breaking News

ಕಂಬಳ ವಿಧೇಯಕ ತಿದ್ದುಪಡಿ ರಾಷ್ಟ್ರಪತಿ ಅಂಗಳಕ್ಕೆ


ಮಂಗಳೂರು, ಫೆ.೨೧- ಕಂಬಳ, ಹೋರಿಗಳ ಆಟ ಹಾಗೂ ಎತ್ತಿನಗಾಡಿ ಸ್ಪರ್ಧೆಗೆ ಸಾಂಪ್ರಾಯಿಕ ಕ್ರೀಡೆ ಸ್ವರೂಪ ನೀಡುವ ತಿದ್ದುಪಡಿ ವಿಧೇಯಕವನ್ನು ರಾಷ್ಟ್ರಪತಿಗೆ ರವಾನಿಸಲು ರಾಜ್ಯಪಾಲರಾದ ವಿಆರ್ ವಾಲಾ ಅವರು ನಿರ್ಧರಿಸಿದ್ದಾರೆ.

ಪ್ರಾಣಿಗಳ ಹಿಂಸಾಚಾರ ತಡೆಗಟ್ಟುವ ಕಾಯ್ದೆಯ ರಾಜ್ಯಪಾಲರ ವ್ಯಾಪ್ತಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಅಧಿವೇಶನದಲ್ಲಿ ವಿಧೇಯಕಕ್ಕೆ ತಿದ್ದುಪಡಿ ತಂದು ರಾಜ್ಯಪಾಲರು ರಾಜ್ಯ ಸರ್ಕಾರ ಕಳುಹಿಸಿತ್ತು. ರಾಜ್ಯಪಾಲರ ಈ ಕ್ರಮದಿಂದ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿ ಕಚೇರಿ ಮೇಲೆ ರಾಜ್ಯದ ಕಂಬಳ ಅವಲಂಬಿತವಾಗಿದೆ. ತಮಿಳುನುನಾಡು ವಿಚಾರದಲ್ಲಿಯೂ ಇದೇ ಪ್ರಕ್ರಿಯೆ ನಡೆದಿತ್ತು. ಈ ಕಾಯ್ದೆಗೆ ಕಾನೂನು ರೂಪ ಸಿಗಬೇಕಾದರೆ ರಾಷ್ಟ್ರಪತಿ ಅಂಕಿತ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಇಲಾಖೆ ನೀಡುವ ಅಭಿಪ್ರಾಯವೂ ಪ್ರಮುಖವಾಗಿತ್ತುದೆ. ಈಗಾಗಲೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದಂತೆ, ಕಾಯೆಯ ಕೇಂದ್ರ ಸರ್ಕಾರದ ಅವಹಾಗಣೆಗೆ ಬಂದರೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅದರಿಂದ ರಾಷ್ಟ್ರಪತಿ ಅಂಗಳದಲ್ಲಿ ರಾಜ್ಯದ ಕಂಬಳಕ್ಕೆ ಅಡ್ಡಿಯಾಗಲಾರದು ಎಂದು ಹೇಳಲಾಗುತ್ತಿದೆ. ಆದರೆ ಎಷ್ಟು ಕಡಿಮೆ ಅವಧಿಯಲ್ಲಿ ಈ ತೀರ್ಮಾನವಾಗಲಿದೆ ಎನ್ನುವುದು ಕುತೂಹಲದ ವಿಚಾರವಾಗಿದೆ.
-sanjevani


loading...

No comments