Breaking News

ಹಿಂದೂ ಸಂಘಟನೆ ಯುವಕರಿಗೆ ಹಲ್ಲೆ ಖಂಡಿಸಿ ತಡ ರಾತ್ರಿ 400 ಮಂದಿಯಿಂದ ಠಾಣೆಗೆ ಮುತ್ತಿಗೆ



ಪಡುಬಿದ್ರಿ : ಮುದರಂಗಡಿ ಮಸೀದಿ ಬಳಿ ವಾಹನವೊಂದನ್ನು ತಡೆದ ಐದು ಮಂದಿ ಮುಸ್ಲಿಂ ಯುವಕರ ತಂಡ, ಹಿಂದೂ ಯುವಕರಾದ ಚಾಲಕ ಹಾಗೂ ನಿರ್ವಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪರಿವಾರ ಸಂಘಟನೆಗಳ ಕಾರ್ಯಕರ್ತರು ಸುಮಾರು 400 ಮಂದಿ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಹನ್ನೆರಡರವರೆಗೂ ಪ್ರತಿಭಟಸಿದರು.

ಒಂದು ಹಂತದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನಾವು ಠಾಣೆಯ ಮುಂಭಾಗದಿಂದ ಕದಲುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದ ಪ್ರತಿಭಟನಾಕಾರರು, ಅಂತಿಮವಾಗಿ ಪೊಲೀಸರು ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದ ರಾಜೇಶ್ ಶೆಣೈ ಎಂಬವರ ಮನವೊಲಿಸಿ, ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ ದಾಖಲೆಯನ್ನು ತೋರಿಸುವ ಮೂಲಕ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಲಾಯಿತಾದರೂ, ಒಲ್ಲದ ಮನಸ್ಸಿನಿಂದ ಕೆಲ ಕಾರ್ಯಕರ್ತರು ಹೋರಾಟದ ಮುಂದಾಳತ್ವ ವಹಿಸಿದವರಿಗೆ “ಇಲಿ ತೆಗೆಯುವುದಕ್ಕಾಗಿ ಗುಡ್ಡ ಅಗೆಯಬೇಕಾಗಿತ್ತೆ” ಎಂಬುದಾಗಿ ಗೊಣಗುತ್ತಾ ಮರಳಿದರು.

ಘಟನಾ ವಿವರ

ಮುದರಂಗಡಿ ರಸ್ತೆಯಲ್ಲಿ ಮುಸ್ಲಿಂ ಯುಕರಿಬ್ಬರು ಬೈಕಿನಲ್ಲಿ ಬರುತ್ತಿದ್ದ ವೇಳೆ ಹಾರನ್ ಹಾಕಿದ್ದ ಎಂಬ ನೆಪವೊಡ್ಡಿ ಸಾಸ್ತಾನದ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ತಡೆದ ಆ ಇಬ್ಬರು ಯುವಕರು, ಚಾಲಕ ಹಾಗೂ ನಿರ್ವಾಹಕನಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಈ ಸಂದರ್ಭ ಮತ್ತೆ ಮೂರು ಮಂದಿ ಅವರೊಂದಿಗೆ ಸೇರಿಕೊಂಡು ಹಲ್ಲೆಗೆ ಸಹಕರಿದ್ದಾರೆ ಎಂಬ ಆರೋಪವಿದೆ.

ಆ ಸಂದರ್ಭ ಘಟನಾ ಸ್ಥಳದಲ್ಲಿ ಜನ ಸೇರುತ್ತಿದಂತೆ ಪ್ರಕರಣ ತಿರುವು ಪಡೆದು ರಾಜಿಯಲ್ಲಿ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸಿದೆಯಾದರೂ, ಪ್ರಮುಖ ಆರೋಪಿಯೊಬ್ಬ ಹಿಂದುಗಳ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿದ ಎಂಬ ನಿಟ್ಟಿನಲ್ಲಿ ಪ್ರಕರಣ ಮತ್ತೆ ಬಿಗಡಾಯಿಸಿ, ಪ್ರಕರಣ ಠಾಣೆಯ ಮೆಟ್ಟಲೇರುವಂತಾಗಿದೆ.

ಆರೋಪಿಗಳಾದ ಮುದರಂಗಡಿ ಮಸೀದಿ ಬಳಿಯ ನಿವಾಸಿಗಳಾದ ಹಾರೀಸ್, ಸಲ್ಮಾನ್ ಹಾಗೂ ಇತರೇ ಮೂರು ಮಂದಿಗಳ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಹಲ್ಲೆಕೋರರಿಂದ ದಾಳಿಗೊಳಗಾದ ಸಾಸ್ತಾನದ ಭಾಸ್ಕರ್ (38) ಹಾಗೂ ಶಂಕರ್ (35) ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರಿಗೆ ಕಲ್ಲು

ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಯತ್ನಿಸುತ್ತಿದಂತೆ ಪ್ರತಿಭಟನಾಕಾರರು ಕಲ್ಲು ಎಸೆದಿದ್ದು, ಆ ಕಲ್ಲು ಹೋಂ ಗಾರ್ಡ್ ಎದೆಗೆ ತಾಗಿದೆ.

ತಂಡ ರಚನೆ

ಆರೋಪಿಗಳ ಬಂಧನಕ್ಕೆ ಇದೀಗಲೇ ತಂಡ ರಚನೆ ಮಾಡಲಿದ್ದು, ಆರೋಪಿಗಳ ಬಂಧನ ಶೀಘ್ರವಾಗಿ ನಡೆಯಲಿದೆ. ಅದಲ್ಲದೆ ಪ್ರತಿಭಟನೆಯ ಹೆಸರಲ್ಲಿ ಪ್ರಚೋಧನಕಾರಿಯಾಗಿ ಮಾತನಾಡಿದ್ದಲ್ಲದೆ, ಠಾಣೆಯ ಒಳಗೆ ನುಗ್ಗಲು ಯತ್ನಿಸಿದ ಆರೋಪದಡಿಯಲ್ಲಿ ಅದ್ಯಾವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂಬುದಾಗಿ ಪ್ರಭಾರ ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

k ale
loading...

No comments