Breaking News

ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಜನಾರ್ಧನ ಪೂಜಾರಿ ಜೀವನ ಚರಿತ್ರೆಮಂಗಳೂರು : ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಜೀವನ ಚರಿತ್ರೆ ಶೀಘ್ರದಲ್ಲೇ ಹೊರಬರಲಿದೆ. ಈ ವಿಚಾರವನ್ನು ಸ್ವತಃ ಪೂಜಾರಿಯವರೇ ಶುಕ್ರವಾರ ಕುದ್ರೋಳಿ ಗೋಕರ್ಣನಾಥ ಪ್ರಾಂಗಣದಲ್ಲಿ ನಡೆದ ವಾರ್ಷಿಕ ಉತ್ಸವ ಮತ್ತು ಶಿವರಾತ್ರಿ ಆಚರಣೆ ಸಂದರ್ಭ ಹೇಳಿದ್ದಾರೆ.

“ಈ ಪುಸ್ತಕದಲ್ಲಿ ಅವರ ರಾಜಕೀಯ ಜೀವನವನ್ನು ಅದೇ ರೀತಿ ಸಮಾಜ ಸುಧಾರಕ ನಾರಾಯಣ ಗುರು ಅವರ ಅನುಯಾಯಿಯಾಗಿ ಅವರು ಮಾಡಿದ ಸಮಾಜ ಸೇವಾ ಕೆಲಸಗಳ ಬಗ್ಗೆ ವಿವರಿಸಲಾಗಿದೆ” ಎಂದು ಹೇಳಿದ್ದಾರೆ.

ಈ ಪುಸ್ತಕವನ್ನು ಬೆಂಗಳೂರು ಮೂಲದ ಬರಹಗಾರ, ಪತ್ರಕರ್ತರಾಗಿರುವ ಲಕ್ಷ್ಮಣ ಕೋಡಸೆ ಬರೆದಿದ್ದಾರೆ. ಪುಸ್ತಕ ರಚನೆ ಪ್ರಕ್ರಿಯೆ ಮುಕ್ತಾಯಗೊಂಡರೆ ಅದು ಬಿಡುಗಡೆಯಾಗುವ ದಿನವನ್ನು ಘೋಷಿಸಲಾಗುವುದು. ಬಿಡುಗಡೆಗೆ ಮುನ್ನ ಹೆಚ್ಚಿನ ಮಾಹಿತಿ ನೀಡುವುದನ್ನು ಅವರು ನಿರಾಕರಿಸಿದ್ದಾರೆ.

loading...

No comments