Breaking News

ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ದವೇ ಹೋರಾಟ ಮಾಡಿದೆ ಈಗ ಬಿಜೆಪಿಗೆ ನಾವು ಹೆದರುತ್ತೀವಾ?


ಬೆಂಗಳೂರು: ಡೈರಿ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಿನ್ನೆಲೆಯಲ್ಲಿ ಇಂದು  ಕಾಂಗ್ರೆಸ್​ ಸಮನ್ವಯ ಸಮಿತಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪ ಆಯಿತು.
ಡೈರಿ ವಿಚಾರವಾಗಿ ಕಳೆದ ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ , ಸಿಎಂ ಸಿದ್ದರಾಮಯ್ಯ ,  ಡೈರಿ ವಿಚಾರವಾಗಿ  ಬಿಜೆಪಿ ಹೋರಾಟಕ್ಕೆ ಸಿದ್ಧತೆ ನಡೆಸಿದೆ, ಅದು ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದೇನಲ್ಲ . ಕಾಂಗ್ರೆಸ್ ಪಕ್ಷ  ಬ್ರಿಟೀಷರ ವಿರುದ್ದವೇ ಹೋರಾಟ ಮಾಡಿದೆ.  ಈಗ ಬಿಜೆಪಿಗೆ ನಾವು ಹೆದರುತ್ತೀವಾ? ಬಿಜೆಪಿಯವರು ಏನು ಮಾಡ್ತಾರೋ ನೋಡೋಣ ಎಂದು ಸವಾಲು ಹಾಕಿದರು.
ಈಗ ನಮ್ಮ ಪಕ್ಷ ಅಧಿಕಾರದಲ್ಲಿದೆ. ಹೋರಾಟ ಮಾಡಲೇಬೇಕು‌ ಎಂಬ ಸನ್ನಿವೇಶ ನಿರ್ಮಾಣ ಆದರೆ ಬಿಜೆಪಿಯವರಿಗಿಂತ ಹತ್ತು ಪಟ್ಟು ಹೆಚ್ಚು ಹೋರಾಟ ಮಾಡುತ್ತೇವೆ.  ಕರ್ನಾಟಕದಲ್ಲಿ ಬಿಜೆಪಿಗಿಂತ ದುರ್ಬಲ ಪಕ್ಷ ಇನ್ನೊಂದು ಇಲ್ಲ  ಎಂದು ಸಿಎಂ ತಿಳಿಸಿದರು.
-SUVARNA NEWS

loading...

No comments