Breaking News

ಮೂರರ ಬಾಲೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ : ಆರೋಪಿ ಸೆರೆ



   

ನವದೆಹಲಿ : ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ 16 ವರ್ಷದ ನೆರೆಯ ಹುಡುಗನೊಬ್ಬ, ಆಕೆಯನ್ನು ಕತ್ತುಹಿಸುಕಿ ಕೊಂದು ಶವ ಹೂಳುವ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದ.

ಪಾಲಕರು ಕೆಲಸಕ್ಕೆ ಹೊಗಡೆ ಹೋಗಿದ್ದ ವೇಳೆ ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕಿಯನ್ನು ದುಷ್ಕರ್ಮಿ ಬಾಲಕ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರ ನಡೆಸಿ, ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮನೆಯಲ್ಲಿ ಬಾಲಕಿ ನಾಪತ್ತೆಯಾಗಿರುವುದನ್ನು ಗಮನಿಸಿದ ಪಾಲಕರು ಕೆಲವು ತಾಸು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಆದರೆ ಬಾಲಕಿಯನ್ನು ಕೊಂದ ಬಾಲಕ, ಒಂದೆಡೆ ಆಕೆಯ ಶವ ದಫನ ಮಾಡಲು ಯತ್ನಿಸುತ್ತಿದ್ದಾಗ ದಾರಿಹೋಕರಿಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ ಹೇರಲಾಗಿದೆ.
loading...

No comments