ಕಾಶ್ಮೀರಿ ಮುಸಲ್ಮಾನರಿಂದ ಶಿವರಾತ್ರಿ ಹಬ್ಬ ಆಚರಣೆ, ಕಾಶ್ಮೀರಿ ಪಂಡಿತರಿಗೆ ಕಾಶ್ಮೀರ ಮರಳುವಂತೆ ಕರೆ.
ಜಮ್ಮು ಕಾಶ್ಮೀರ : ಹಿಂದೂಗಳ ಪವಿತ್ರ ಹಬ್ಬ ಮಹಾಶಿವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಹಿಂದೂಗಳು ಶ್ರದ್ದೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಮ್ಮು ಕಾಶ್ಮೀರದ ಬಂಡಿಪೊರದ ಸುಂಬಾಲ್ ಪಟ್ಟಣದಲ್ಲಿರುವ ಪುರಾತನ ಶಿವನ ದೇವಾಲಯದಲ್ಲಿ ಮುಸ್ಲಿಂ ಬಾಂಧವರೂ ಹಿಂದೂಗಳ ಪವಿತ್ರ ಮಹಾಶಿವರಾತ್ರಿ ಹಬ್ಬವನ್ನು ಶನಿವಾರ ಆಚರಣೆ ಮಾಡಿದ್ದಾರೆ. ಕಾಶ್ಮೀರಿ ಪಂಡಿತರ ಬಹುದೊಡ್ಡ ಹಬ್ಬ 'ಹೆಹ್ರಾತ್ ಉತ್ಸವವನ್ನು' ಕಾಶ್ಮೀರಿ ಮುಸಲ್ಮಾನ ಬಾಂಧವರು ಆಚರಣೆ ಮಾಡಿದರು.
ಈ ಪುರಾತನ ಶಿವನ ದೇವಾಲಯವು ಬಂಡಿಪೊರದ ಝೇಲಂ ನದಿ ತಟದಲ್ಲಿದೆ, ಹಿಂದೆ ಕಾಶ್ಮೀರಿ ಪಂಡಿತರು ಈ ದೇವಾಲಯದಲ್ಲಿ 'ಹೆಹ್ರಾತ್ ಉತ್ಸವವನ್ನು' ಅದ್ದೂರಿಯಾಗಿ ಆಚರಿಸುತ್ತಿದ್ದರು, ಆದರೆ 1990ರಲ್ಲಿ ಭಯೋತ್ಪಾದಕ ದಾಳಿಗಳಿಂದ ಕಾಶ್ಮೀರಿ ಪಂಡಿತರು ಕಾಶ್ಮೀರದಿಂದ ವಲಸೆ ಹೋದ ಬಳಿಕ ಈ ದೇವಾಲಯದ ಕಡೆ ಹಲವು ವರ್ಷಗಳಿಂದ ಯಾರೂ ಸುಳಿದಿರಲಿಲ್ಲ.ಉಗ್ರಗಾಮಿಗಳ ಹಾವಳಿ ಹೆಚ್ಚಾದಂತೆ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಕಡೆಮೆಯಾಯಿತು ಎನ್ನುತ್ತಾರೆ ಹೇಳುತ್ತಾರೆ.
ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆದಿರುವುದರಿಂದ ಈಗ ದೇವಸ್ಥಾನದ ಅರ್ಚಕರಾಗಿ ಇಮ್ತಿಯಾಜ್ ಅಹ್ಮದ್ ಶಿವರಾತ್ರಿಯಂದು ಶಿವಲಿಂಗಕ್ಕೆ ನೀರೆರೆದು ಭಕ್ತಿಯಿಂದ ಹಿಂದೂ ವಿಧಿವಿಧಾನದಂತೆ ಪೂಜೆಗಳನ್ನು ನೆರವೇರಿಸಿದರು. ಶಿವರಾತ್ರಿ ಪ್ರಯುಕ್ತ ದೇವಾಲಯವನ್ನು ಸ್ವಚ್ಛ ಮಾಡಲಾಗಿದೆ, ನಾವು ಮುಸಲ್ಮಾನರಾದರೂ ಹಬ್ಬ ಎಂಬುದು ಎಲ್ಲರಿಗೂ ಸಮಾನವಾದದ್ದು ಎನ್ನುತ್ತಾರೆ ಅರ್ಚಕ ಇಮ್ತಿಯಾಜ್ ಅಹ್ಮದ್.
ಸ್ಥಳೀಯ ನೂರಾರು ಮಸಲ್ಮಾನ ಬಾಂಧವರು ಅಹ್ಮದ್ ಅವರ ಜೊತೆಗೂಡಿ ಮಹಾಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ 'ಕಾಶ್ಮೀರಿ ಪಂಡಿತರೇ ಮರಳಿ ಬನ್ನಿ, ಮುಂದಿನ ಹೆಹ್ರಾತ್ ಉತ್ಸವ ಜೊತೆಯಾಗಿ ಆಚರಿಸೋಣ' ಎಂಬ ಫಲಕಗಳ ಪ್ರದರ್ಶನ ಮಾಡಿದರು.
loading...
No comments