Breaking News

ವೈರಲ್ ಆದ ಅಸ್ಸಾಂ ಬಿಜೆಪಿ ಶಾಸಕನ ರಾಸ ಲೀಲೆ



ಗುವಾಹಟಿ : ಬಿಜೆಪಿ ಶಾಸಕನೊಬ್ಬನ ಲೈಂಗಿಕ ಚಟುವಟಿಕೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಬಳಿಕ ಅಸ್ಸಾಂನ ಬಿಜೆಪಿ ವಿರೋಧಿಗಳ ತಂತ್ರಗಾರಿಕೆ ಬಗ್ಗೆ ಕೆಂಡಾಮಂಡಲವಾಗಿದೆ.
ಮೋರಿಗಾಂವ್ ಅಸೆಂಬ್ಲಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕ ರಮಾಕಾಂತ್ ದೇವುರಿ ಹೋಟೆಲೊಂದರಲ್ಲಿ ಮಹಿಳೆಯೊಬ್ಬಳ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದರೂ, “ಆತ ನಮ್ಮವನಲ್ಲ” ಎಂದು ಬಿಜೆಪಿ ಹೇಳಿದೆ.
“ಇದು ನನ್ನ ವಿರುದ್ಧ ಪಿತೂರಿ ಕೆಲಸವಾಗಿದೆ. ಇನ್ನೇನು ವಿಸ್ತರಣೆಗೊಳ್ಳಲಿರುವ ರಾಜ್ಯ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಅದನ್ನು ತಪ್ಪಿಸಲೆಂದು ಈ ರೀತಿಯ ಸುಳ್ಳು ಪ್ರಸಾರ ಮಾಡಲಾಗಿದೆ” ಎಂದು ದೇವುರಿ ಹೇಳಿದ್ದಾರೆ.“ನಾನು ರಾಜೀನಾಮೆ ನೀಡಲೂ ಸಿದ್ದನಿದ್ದೇನೆ. ಒಂದೊಮ್ಮೆ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಈ ವಿಷಯ ಸಾಬೀತಾದರೆ ನಾನು ರಾಜಕೀಯ ಸಂನ್ಯಾಸ ಪಡೆಯುವೆ” ಎಂದವರು ಹೇಳಿದರು.

loading...

No comments