ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಬಳ್ಳಾರಿ:ಛತ್ರಪತಿ ಶಿವಾಜಿ ಅವರ ಜಯಂತಿ ಅಂಗವಾಗಿ, ಬಳ್ಳಾರಿ ನಗರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತಲ್ಲದೇ ಸಿಹಿ ಹಂಚಲಾಯಿತು.
ನಗರದ ಕೌಲ್ ಬಜಾರ್ ಪ್ರದೇಶದ 26ನೇ ವಾರ್ಡ್ ವ್ಯಾಪ್ತಿಯಲ್ಲಿನ ಶಿವಾಜಿ ಕಾಲೋನಿಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದವರ ವತಿಯಿಂದ ಶಿವಾಜಿ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತಲ್ಲದೇ ಸಿಹಿ ವಿತರಿಸಲಾಯಿತು. ರಮೇಶ್ ಅವರ ನೇತೃತ್ವದಲ್ಲಿ ಶಿವಾಜಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಧುರೀಣರಾದ ಎಂ.ಗೋವಿಂದರಾಜುಲು, ವಿ.ನಾಗರಾಜರೆಡ್ಡಿ, ಬಸವರಾಜ್, ನಾಗಲಕೆರೆ ಗೋವಿಂದ್, ವೆಂಕಟೇಶ್, ಶಿವಪ್ಪ, ರಮೇಶ್, ಎಸ್.ರಾಜೇಶ್ ರಾವ್ ಹಾಗೂ ಮಲ್ಲಿ, ಡಿ.ರಾಜೇಶ್, ಪಾಂಡು, ಮಂಜು, ಗಣೇಶ್, ಅರುಣ್, ವಿನೋದ್, ಹರ್ಷಿತ್, ಸಮರ್ಥ್, ಚೇತನ್ ತುಕಾರಾಂ, ವಿಶ್ವ, ರಘು, ಸೋಪನ್, ಸಮೀರ್ ಮತ್ತು ಇತರೆ ಅನೇಕರು ಉಪಸ್ಥಿತರಿದ್ದರು
loading...
No comments