Breaking News

ಹಾರುವ ಕಾರು ನೋಡಿದ್ದೀರಾ ?


ಪ್ರಪಂಚದ ಮೊದಲ ಕ್ವಾಡ್-ಕಾಪ್ಟರ್‌ಗಳ ವಿಚಾರದ ಬಗ್ಗೆ ಈಗಾಗಲೇ ದುಬೈ ಸರ್ಕಾರ ಢ ನಿಲುವಿಗೆ ಬಂದಿದ್ದು, ಈಗಾಗಲೇ ಪರೀಕ್ಷೆ ನೆಡೆಸಿರುವ ಈ ಟ್ಯಾಕ್ಸಿಗಳನ್ನು ಲೋಕಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದೆ.

ಚೈನಾ ನಿರ್ಮಿತ ಈ ಹಾರುವ ಸ್ವಯಂ ಚಾಲಿತ ಈಹ್ಯಾಂಗ್ ೧೮೪ ಹೆಸರಿನ ವಾಹನವು ಪ್ರತಿ ಗಂಟೆಗೆ ೧೦೦ ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಭೂಮಿಯಿಂದ ಸುಮಾರು ೩೦೦ ಮೀಟರ್ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ವಾಹನ ಇದಾಗಿದೆ.

ಎರಡು ಗಂಟೆ ಕಾಲ ವಿದ್ಯುತ್ ಪೂರೈಸಿದರೆ ೩೦ ನಿಮಿಷಗಳಷ್ಟು ಕಾಲ ಹಾರಬಲ್ಲದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕ ತಾನು ತಲುಪಬೇಕಾಗಿರುವ ನಿರ್ದಿಷ್ಟ ಸ್ಥಳವನ್ನು ಭೂಪಟದಲ್ಲಿ ಗುರುತಿಸಬೇಕು ಅಷ್ಟೇ, ಉಳಿದ ಎಲ್ಲಾ ಕೆಲಸಗಳನ್ನೂ ತಾನೇ ನೋಡಿಕೊಳ್ಳಲಿದೆ ಈ ಚಮತ್ಕಾರಿ ಟ್ಯಾಕ್ಸಿ.

“ವರ್ಲ್ಡ್ ಗವರ್ನಮೆಂಟ್ ಸಮ್ಮಿತ್‌ನಲ್ಲಿ ಪ್ರದರ್ಶಿಸಲಾಗಿದ್ದ ಈ ವಾಹನವು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ, ಕಾರ್ಯರೂಪಕ್ಕೂ ಬರುತ್ತಿರುವುದು ಹೆಗ್ಗಳಿಕೆ ಮತ್ತು ಇದೇ ಜೂನ್ ಅಂತ್ಯದ ಒಳಗಾಗಿ ಈ ಚಾಲಕ ರಹಿತ ಟ್ಯಾಕ್ಸಿಗಳನ್ನು ದುಬೈನಲ್ಲಿ ನೋಡಲಿದ್ದೀರಿ” ಎಂದು ದುಬೈನ ಸಾರಿಗೆ ಇಲಾಖೆಯ ಮುಖ್ಯಸ್ಥ ಮಟ್ಟರ್
ಅಲ್-ಟಯೆರ್ ಹೇಳಿಕೆ ನೀಡಿದ್ದಾರೆ.

ಎಂಟು ಬಲಿಷ್ಠ ರೆಕ್ಕೆಗಳು ಹೊಂದಿರುವ ಈ ಕ್ವಾಡ್-ಕಾಪ್ಟರ್ ಟ್ಯಾಕ್ಸಿಯು ಎಂತಹ ವಾತಾವರಣದಲ್ಲಿಯೂ ಸಹ ಸಮತೋಲನ ಕಾಯ್ದುಕೊಳ್ಳುವ ವ್ಯವಸ್ಥೆ ಹೊಂದಿದ್ದು, ಇದರಿಂದಾಗಿ ಪ್ರಯಾಣಿಕನ ಸುರಕ್ಷತೆ ಮತ್ತು ಸ್ಥಳದ ನಿಖರತೆ ಬಗ್ಗೆ ಹೆಚ್ಚು ಒತ್ತು ನೀಡಿದಂತಾಗಿದೆ. ಟ್ರಾಫಿಕ್ ಕಿರಿ ಕಿರಿಯಿಂದಾಗಿ ಬೇಸತ್ತಿರುವ ಜನರಿಗೆ ಈ ಕ್ವಾಡ್-ಕಾಪ್ಟರ್ ಆಗಮನದಿಂದ ಸ್ವಲ್ಪ ನಿರಾಳರಾಗುವುದರಲ್ಲಿ ಸಂಶಯವೇ ಇಲ್ಲ.

loading...

No comments