Breaking News

ನೋಟು ಮುದ್ರಣದಲ್ಲಿ ಆರ್.ಬಿ.ಐ ಗೆ ಸೆಡ್ಡು ಹೊಡೆದ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ.

ನವದೆಹಲಿ : ಭಾರತದಲ್ಲಿ ನೋಟು ನಿಶೇಧದ ನಂತರ ಬೀಗ ಬಿದ್ದಿದ್ದ ಪಾಕಿಸ್ತಾನದ ಕರಾಚಿ ಹಾಗೂ ಲಾಹೋರ್ ನಲ್ಲಿನ ನಕಲಿ ನೋಟು ಮುದ್ರಣಾಲಯಗಳು ಮತ್ತೆ ಕಾರ್ಯಾರಂಭ ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪಣ ತೊಟ್ಟಿರುವ ಪಾಕಿಸ್ತಾನ ಇದೀಗ ಹೊಸ 2000ಮುಖಬೆಲೆಯ ನೋಟುಗಳನ್ನೂ ನಕಲಿ ಮಾಡುತ್ತಿದೆ. 
ಈ ನೋಟುಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮುದ್ರಿಸುತ್ತಿದ್ದು ಅಚ್ಚರಿಯ ವಿಷಯವೆಂದರೆ ನಕಲಿ ನೋಟುಗಳು ಭಾರತದಲ್ಲಿ ಮುದ್ರಿಸಲಾಗುತ್ತಿರುವ ನೋಟುಗಳಿಗಿಂತ ಉತ್ತಮ ಗುಣಮಟ್ಟದ್ದಾಗಿದೆ.ಅಷ್ಟೇ ಅಲ್ಲದೆ ಆರ್ ಬಿಐ ಮುದ್ರಿಸುವ ನೋಟುಗಳ ಭದ್ರತಾ ವೈಶಿಷ್ಟ್ಯಗಳ ರಹಸ್ಯ ತಿಳಿದುಕೊಂಡ ಐಎಸ್ಐ ಈಗ ಅದೇ ಮಾದರಿಯಲ್ಲಿ ನೋಟುಗಳನ್ನು ಮುದ್ರಿಸುತ್ತಿದೆ.
ಆರ್ ಬಿಐ ಮುದ್ರಿಸುತ್ತಿರುವ ಅಸಲಿ ನೋಟುಗಳ ಪೈಕಿ ಹಲವು ನೋಟುಗಲ್ಲಿ ಮುದ್ರಣಾ ದೋಷ ಕಂಡುಬಂದಿತ್ತು. ಆದರೆ ಪಾಕಿಸ್ತಾನದ ಐಎಸ್ಐ ಸಾರಥ್ಯದಲ್ಲಿ ಮುದ್ರಿಣವಾಗುತ್ತಿರುವ ನೋಟುಗಳಲ್ಲಿ ಅಂತಹ ಯಾವುದೇ ದೋಷಗಳು ಕಂಡುಬರಲು ಸಾಧ್ಯವಿಲ್ಲವಂತೆ. ಅಷ್ಟರ ಮಟ್ಟಿಗೆ ಪಾಕಿಸ್ತಾನದ ಕರಾಚಿ ಹಾಗೂ ಲಾಹೋರ್ ನಲ್ಲಿರುವ ನಕಲಿ ನೋಟು ಮುದ್ರಣಾಲಯಗಳು ನೋಟುಗಳನ್ನು ಮುದ್ರಿಸುತ್ತಿದೆ.
ಈಗಾಗಲೇ ಶೇಕಡಾ 50ರಷ್ಟು ಭದ್ರತಾ ವೈಶಿಷ್ಟ್ಯಗಳನ್ನು ನಕಲು ಮಾಡಿರುವ ನಕಲಿ ನೋಟು ಮುದ್ರಣಾಲಯಗಳು, ಹೊಸ ನೋಟುಗಳ ಭದ್ರತಾ ವೈಶಿಷ್ಟ್ಯಗಳು ನಕಲು ಮಾಡಲು ಅಸಾಧ್ಯ ಎಂದಿದ್ದ ಆರ್.ಬಿ.ಐ ಗೆ ಸಡ್ಡು ಹೊಡೆದಿದೆ.ಈ ಎಲ್ಲಾ ಕಾರಣಗಳಿಂದ ಈ ನೋಟುಗಳನ್ನು ನಕಲಿಯೆಂದು ಗುರುತಿಸುವುದು ಅಸಾಧ್ಯ ಎನ್ನುವ ಮಟ್ಟಿಗೆ ನಕಲಿ ನೋಟುಗಳ ಮುದ್ರಣ ಗುಣಮಟ್ಟ ಇದೆ ಎನ್ನಲಾಗುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಈ ನೋಟುಗಳು ಬಾಂಗ್ಲಾದೇಶದಲ್ಲಿರುವ ನಕಲಿ ನೋಟು ಜಾಲದ ಮೂಲಕ ಭಾರತಕ್ಕೆ ಪ್ರವೇಶ ಮಾಡಲಿದೆ. ಪಾಕಿಸ್ತಾನದಿಂದ-ದುಬೈ ನಂತರ ದುಬೈನಿಂದ-ಬಾಂಗ್ಲಾದೇಶ ಹಾಗೂ ಬಾಂಗ್ಲಾದೇಶದ ನಕಲಿ ನೋಟು ಜಾಲದ ಮೂಲಕ ಭಾರತ ಪ್ರವೇಶಿಸಲಿದೆ.ಈ ನಕಲಿ ನೋಟುಗಳ ಹರಿವನ್ನು ತಡೆಯಲು ಭಾರತ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ.
loading...

No comments