ಲಕ್ಷಗಟ್ಟಲೆ ಹಣ ಲಪಟಾಯಿಸಿ ಬೆಂಗಳೂರಿನಿಂದ ಪಾಕಿಸ್ತಾನಕ್ಕೆ ಪರಾರಿಯಾದ ಕ್ಯಾಶಿಯರ್
ಬೆಂಗಳೂರು : ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಲಕ್ಷಾಂತರ ರುಪಾಯಿ ದೋಚಿದ ಕ್ಯಾಶಿಯರ್‌ವೊಬ್ಬ ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಈ ಸಂಬಂಧ ಕ್ಯಾಶಿಯರ್ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಕೋನ್‌ಗಾಂವ್‌ನ ನಿವಾಸಿ ಮೊಹಮ್ಮದ್ ರ್ಇಾನ್ (30) ಬಂಧಿತ ಆರೋಪಿ. ಈತನ ತಂದೆ ಫಾರೂಕ್ ಇಬ್ರಾಹಿಂ ಪರಾರಿಯಾಗಿದ್ದಾನೆ. ಯುನೈಟೆಡ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿದ್ದ ಇಬ್ರಾಹಿಂ 51 ಲಕ್ಷ ಹಣ ದೋಚಿದ್ದಾನೆ. ಈ ಹಣದ ಪೈಕಿ 30 ಲಕ್ಷವನ್ನು ಮುಂಬೈನಲ್ಲಿರುವ ತನ್ನ ಪುತ್ರ ಮೊಹಮ್ಮದ್ ಇರ್ಫಾನ್'ಗೆ ಕೊಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾನೆ. ಇದೀಗ ಈತನ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
loading...
No comments