Breaking News

ಟ್ರಂಪ್ ಆದೇಶಕ್ಕೆ ಸಂಸದರ ಖಂಡನೆ


ಅಮೆರಿಕವನ್ನು ಕರಾಳದಿನಗಳತ್ತ ಕರೆದೊಯ್ಯುವ ವಲಸೆ ಕುರಿತಾದ ಅಧ್ಯಕ್ಷ ಟ್ರಂಪ್ ಅವರ ಆಜ್ಞೆಯನ್ನು ಬೆಂಬಲಿಸಿರುವ ಅಮೆರಿಕದ `ರಿಪಬ್ಲಿಕನ್ ಹಿಂದೂ ಮೈತ್ರಿ ಸಂಘ`ವನ್ನು ಭಾರತ ಮೂಲದ ಅಮೆರಿಕದ ಸಂಸದರು ತೀವ್ರವಾಗಿ ಖಂಡಿಸಿದ್ದಾರೆ.

`ಅಮೆರಿಕನ್ ಕಾಂಗ್ರೆಸ್‌ನ ಅತ್ಯಂತ ಹಿರಿಯ ಭಾರತ ಮೂಲದ ಅಮೆರಿಕನ್ ಸದಸ್ಯನಾಗಿ ಹೇಳುವುದಾದರೆ ಅಮೆರಿಕನ್ನರಾಗಿ ನಾವು ಯಾರು ಎಂಬುದನ್ನು ಟ್ರಂಪ್ ಅವರ ಆಜ್ಞೆ ಬಿಂಬಿಸುವುದಿಲ್ಲ` ಎಂದು ಮೂರು ಬಾರಿ ಕಾಂಗ್ರೆಸ್‌ಗೆ ಎಂದು ಮೂರು ಬಾರಿ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ ಅಮಿಬೆರಾ ಹೇಳಿದ್ದಾರೆ.

`ರಿಪಬ್ಲಿಕನ್ ಹಿಂದೂ ಮೈತ್ರಿ ಸಂಘಟನೆಯ ಇಂದಿನ ಪ್ರತಿಕ್ರಿಯೆ ಭಾರತ- ಅಮೆರಿಕನ್ ಸಮುದಾಯದ ಹರವು ಮತ್ತು ವಿವಿಧತೆಯನ್ನು ಬಿಂಬಿಸುವುದಿಲ್ಲ` ಎಂದವರು ರಿಪಬ್ಲಿಕನ್ ಪಕ್ಷಕ್ಕೆ ತಳುಕು ಹಾಕಿಕೊಂಡಿರುವ ಸಂಘಟನೆಯನ್ನು ಅಪರೂಪಕ್ಕೆಂಬಂತೆ ಟೀಕಿಸಿದ್ದಾರೆ.

ಮೈತ್ರಿ ಸಂಘದ ವಿರುದ್ಧ ಅಮಿಬೆರಾ ಅವರೊಂದಿಗೆ ಇತರ ಮೂವರು ಭಾರತ- ಅಮೆರಿಕನ್ ಸಂಸದರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. `ಇಸ್ಲಾಮಿಕ್ ಭಯೋತ್ಪಾದನೆಯಿಂದ ನಮ್ಮ ನಾಗರಿಕರನ್ನು ರಕ್ಷಿಸಲು ಟ್ರಂಪ್ ಆಡಳಿತ ಕೈಗೊಂಡಿರುವ ಈ ನಿರ್ದಾಕ್ಷಿಣ್ಯ ನಿಲುವನ್ನು ನಾವು ಶ್ಲಾಘಿಸುತ್ತೇವೆ` ಎಂದು ಸಂಘದ ಅಧ್ಯಕ್ಷ ಶಾಲಬ್ ಕುಮಾರ್ ಹೇಳಿದ್ದಾರೆ.

loading...

No comments