Breaking News

ರೋಷಾವೇಶದಿಂದ ಜಯಲಲಿತಾ ಸಮಾಧಿಗೆ ಕೈ ಬಡಿದು ಶಶಿಕಲಾ ಪ್ರತಿಜ್ಞೆ



ತಮಿಳುನಾಡು:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಶಶಿಕಲಾ ಸುಪ್ರೀಂಕೋರ್ಟ್‍ನ ಆದೇಶದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಪ್ರಯಾಣ ಬೆಳೆಸುವ ಮುನ್ನಾ ಪೋಯಸ್ ಗಾರ್ಡನ್‍ನಲ್ಲಿರುವ ಜಯಲಲಿತಾ ನಿವಾಸದಿಂದ ಚೆನ್ನೈನ ಮರೀನಾ ಬೀಚ್‍ಗೆ ತೆರಳಿ ಜಯಲಲಿತಾ ಸಮಾಧಿಗೆ ನಮನ ಸಲ್ಲಿಸಿದರು.

ರೋಷಾವೇಶ ವಿ.ಶಶಿಕಲಾ ನಟರಾಜನ್ ಅವರ ಮುಖದಲ್ಲಿ ಕಾಣುತ್ತಿತ್ತು. ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಅವರ ಸಮಾಧಿ ಬಳಿ ಬಂದ ಅವರು ನಮಿಸಿ ಸಮಾಧಿ ಮೇಲೆ ಮೂರು ಬಾರಿ ಆಕ್ರೋಶಭರಿತರಾಗಿ ತಮ್ಮ ಕೈಯಿಂದ ಜೋರಾಗಿ ಬಡಿದರು. ಮನಸ್ಸಿನಲ್ಲಿ ಅದೇನೋ ಹೇಳಿಕೊಂಡು ಪ್ರತಿಜ್ಞೆ ಮಾಡಿದಂತಿತ್ತು.   
loading...

No comments