Breaking News

ಮಂಗಳೂರಿನಲ್ಲಿ ಕುಖ್ಯಾತ ರೌಡಿ ಕಾಲಿಯಾ ರಫೀಕ್ ನ ಬರ್ಬರ ಹತ್ಯೆ


ಮಂಗಳೂರು : ದರೋಡೆ, ಕೊಲೆ, ಕೊಲೆ ಯತ್ನ ಮುಂತಾದ ಕೇಸುಗಳ ಸರಮಾಲೆಯನ್ನೇ ಹೊಂದಿದ್ದ  ಕುಖ್ಯಾತ ರೌಡಿಶೀಟರ್ ಕಾಲಿಯಾ ರಫಿಕ್ (35)ನನ್ನು ಗುಂಡಿಟ್ಟು, ತಲ್ವಾರ್‍ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
  ನಾಲ್ವರು ಸಂಬಂಧಿಕರ ಜತೆ ಕಾರಿನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಕೋಟೆಕಾರ್ ಪೆಟ್ರೋಲ್ ಬಂಕ್ ಬಳಿ ಮತ್ತೊಬ್ಬ ರೌಡಿ ಶೀಟರ್ ನೂರ್ ಅಲಿ ಅಡ್ಡಗಟ್ಟಿದ್ದಾನೆ.  ಇದಕ್ಕೂ ಮುನ್ನ ಲಾರಿಯೊಂದು ಕಾಲಿಯಾನ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಉಪ್ಪಳದ ರೌಡಿ ನೂರ್ ಅಲಿ ಮತ್ತವನ ಸಹಚರರು ಏಕಾಏಕಿ ದಾಳಿಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳಲು ಕಾಲಿಯಾ ಓಡಿದನಾದರೂ ರೌಡಿ ನೂರ್ ಅಲಿ ಆತನ ಮೇಲೆ ಗುಂಡು ಹಾರಿಸಿ ನಂತರ ತಲ್ವಾರ್‍ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.



ದಾಳಿ ವೇಳೆ ಕಾಲಿಯಾನ ಸಂಬಂಧಿ ಜಾಹಿದ್‍ನಿಗೂ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಕೊಲೆಯಾದ ರೌಡಿ ಕಾಲಿಯಾ ರಫೀಕ್ ವಿರುದ್ಧ ಕರ್ನಾಟಕ, ಕೇರಳ ರಾಜ್ಯಗಳಲ್ಲಿ 45ಕ್ಕೂ ಹೆಚ್ಚು ಕೊಲೆ, ಕೊಲೆಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

loading...

No comments