Breaking News

ಶಿವರಾತ್ರಿ ಮುಗಿದ ನಂತರ ಧರಣಿ ನಡೆಸುತೇನೆ : ದೇವೇಗೌಡ


ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಾವೇಶದಿಂದ ಮಾತುನಾಡುತ್ತಾರೆಯೇ ವಿನಃ ಅವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಇಂದಿಲ್ಲಿ ಟೀಕಿಸಿದರು.

ಅಧಿಕಾರಿಗಳ ಮೇಲೆ ಹಿಡಿತವಿಲ್ಲದಂತಾಗಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. ರಾಜ್ಯಾದ್ಯಂತ ಬರಗಾಲ ಪರಿಸ್ಥಿತಿ ಉಂಟಾಗಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದರೂ ಜನರ ಸಮಸ್ಯೆಯನ್ನು ಯಾರು ಕೇಳುವರಿಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಫ್ದ‌ರ್‌ಜೆಂಗ್ ಲೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಸನ ನಗರ ವಾಸಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದನ್ನು ಪ್ರತಿಭಟಿಸಿ ಶಿವರಾತ್ರಿ ಮುಗಿದ ನಂತರ ಧರಣಿ  ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ

loading...

No comments