ಮನೆ ಊಟ ಆಯ್ತು, ಈಗ ಜೈಲಾಧಿಕಾರಿಗಳಲ್ಲಿ ಶಶಿಕಲಾ ಇಟ್ಟ ಹೊಸ ಬೇಡಿಕೆ ಏನು.?
ಬೆಂಗಳೂರು : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಶಶಿಕಲಾ ಕೆಲ ದಿನಗಳ ಹಿಂದೆ ತನಗೆ ಮನೆಯಲ್ಲಿ ತಯಾರಿಸಿದ ಆಹಾರ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ತಿರಸ್ಕೃತಗೊಂಡ ಬೆನ್ನಿಗೆ ತನಗೆ ಆರೋಗ್ಯ ಸರಿ ಇಲ್ಲ ಹಾಗಾಗಿ ಚೆನ್ನೈ ಜೈಲಿಗೆ ಸ್ಥಳಾಂತರಗೊಳಿಸುವಂತೆ ಕೇಳಿಕೊಂಡಿದ್ದಳು. ಇದಕ್ಕೂ ನ್ಯಾಯಲಯ ಸೂಕ್ತ ಕಾರಣ ನೀಡುವಂತೆ ಹೇಳಿತ್ತು.
ಈಗ ಮತ್ತೆ ತನ್ನ ಬೇಡಿಕೆ ಸರಮಾಲೆಯನ್ನು ಮುಂದುವರೆಸಿರುವ ಶಶಿಕಲಾ ಟೇಬಲ್ ಫ್ಯಾನ್ ಹಾಗೂ ಹಾಸಿಗೆ ನೀಡುವುಂತೆ ಜೈಲಿನ ಅಧಿಕಾರಿಗಳ ಜೊತೆ ಮನವಿ ಮಾಡಿದ್ದಾರೆ. ತನ್ನ ಆರೋಗ್ಯ ಮತ್ತು ವಯಸ್ಸಿನ ಹನ್ನೆಲೆಯಲ್ಲಿ ತನ್ನ ಕೊಠಡಿಗೆ ಟೇಬಲ್ ಪ್ಯಾನ್ ಹಾಗೂ ಹಾಸಿಗೆ ವ್ಯವಸ್ಥೆ ಕಲ್ಪಿಸುವಂತೆ ತನ್ನ ಆಪ್ತರ ಮೂಲಕ ಮನವಿ ಮಾಡಿಸಿದ್ದಾರೆ.
ಈಗಾಗಲೇ ಒಂದು ವಾರದ ಜೈಲುವಾಸದಲ್ಲಿ ಶಶಿಕಲಾ ಜೈಲಿನ ಬದುಕಿಗೆ ಹೊಂದಿಕೊಳ್ಳುತ್ತಿದ್ದು, ಅವರ ರಕ್ತದೊತ್ತಡವೂ ನಿಯಂತ್ರಣದಲ್ಲಿದೆ. ಶಶಿಕಲಾ ಅವರಿಗೆ ಬೇಕಾದ ಸೌಲಭ್ಯಗಳನ್ನು ಜೈಲಿನ ಅಧಿಕಾರಿಗಳು ನೀಡಿದರೆ ಅವರು ಜೈಲಿನಲ್ಲಿ ಆರೋಗ್ಯವಾಗಿ ಆರಾಮವಾಗಿ ಇರಬಹುದು. ಶಶಿಕಲಾ ಅವರನ್ನು ಚೆನ್ನೈ ಜೈಲಿಗೆ ಸ್ಥಳಾಂತರಿಸುವವರೆಗೆ ಬೆಂಗಳೂರಿನ ಜೈಲಿನಲ್ಲಿ ಅವರಿಗೆ ಹಾಸಿಗೆ, ಟೇಬಲ್ ಫ್ಯಾನ್ ಮತ್ತು ಬಾತ್‍ರೂಂ ಸೌಲಭ್ಯವನ್ನು ನೀಡಿ ಅಂತಾ ಎಐಎಡಿಎಂಕೆ ಕರ್ನಾಟಕ ಪ್ರಾಂತ್ಯದ ಕಾರ್ಯದರ್ಶಿ ಜೈಲಾಧಿಕಾರಿಯನ್ನು ಕೇಳಿಕೊಂಡಿದ್ದಾರೆ.

loading...
No comments