ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿದ್ದ ಮುಸ್ಲಿಂ ಲೀಗ್ ಮುಖಂಡ ಮೃತ
ಕಾಸರಗೋಡು : ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಸ್ಲಿಂ ಲೀಗ್ ಮುಖಂಡ ನಿಧನರಾಗಿದ್ದಾರೆ.
ಮೊಗ್ರಾಲ್ ಪುತ್ತೂರು ಎರಿಯಾಲ್ ನಿವಾಸಿ ಅಬ್ದುಲ್ ಗಫೂರ್ ಮೃತಪಟ್ಟವರು. ಮಂಗಳವಾರ ಮಧ್ಯಾಹ್ನ ಗಫೂರ್ ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದು ನೆಲಕ್ಕುರುಳಿದ ಪರಿಣಾಮ ಗಫೂರ್ ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಗಫೂರ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನೆಲಕ್ಕುರುಳಿ ತಲೆಗೆ ಗಂಭೀರ ಗಾಯಗೊಂಡ ಗಫೂರರನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
loading...
No comments