ವಿಜಯಪುರ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ವಿಜಯಪುರ, ಫೆ.2- ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಂಚಿನಾಳ ತಾಂಡಾದ ಹೊರವಲಯದಲ್ಲಿ ನಡೆದಿದೆ. ಸಂತೋಷ್ ಜಾದವ್ (26) ಆತ್ಮಹತ್ಯೆ ಮಾಡಿಕೊಂಡ ರೈತ. ಬೆಳೆ ಬೆಳೆಯಲೆಂದು ಖಾಸಗಿ ವ್ಯಕ್ತಿ ಹಾಗೂ ಬ್ಯಾಂಕ್‍ನಿಂದ ಸುಮಾರು 5 ಲಕ್ಷ ರೂ. ಸಾಲ ಮಾಡಿದ್ದ ವೇಳೆ ನಷ್ಟವಾದ ಹಿನ್ನೆಲೆಯಲ್ಲಿ ಮನನೊಂದು ಹಾಗೂ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
-eesanje
loading...
No comments