Breaking News

ಉಪಚುನಾವಣೆಗೆ ಎರಡು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿ ನಿಲ್ಲಿಸುತ್ತೇವೆ : hdk


ನಂಜನಗೂಡು ಹಾಗೂ ಗುಂಡ್ಲು ಪೇಟೆ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿಗಳನ್ನ ನಿಲ್ಲಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ನಿಲ್ಲಿಸುತ್ತೇವೆ. ನನ್ನಲ್ಲಿ ಯಾವುದೇ ಭಯ ಗೊಂದಲವಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ಹಾಗೂ ಕಳಲೆ ಕೇಶವ ಮೂರ್ತಿ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಪಾತ್ರ ಅಪಾತವಾಗಿದೆ. ಎರಡು ಕ್ಷೇತ್ರದಲ್ಲಿ ಗೊಂದಲ ಸೃಷ್ಠಿ ಮಾಡುತಿದ್ದಾರೆ. ಕಳೆದ ಎರಡು ಬಾರಿ ಅಭ್ಯರ್ಥಿ ಆಗಿದ್ದ ಕಳಲೆ ಕೇಶವಮೂರ್ತಿ ಇದೀಗ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರಲು ನಾನಾಗಲಿ, ಹೆಚ್ ಡಿ ದೇವೇಗೌಡರಾಗಲಿ ಪಕ್ಷದ‌ನಾಯಕರಾಗಲಿ ಯಾರೂ ಹೇಳಿಲ್ಲ. ನಮ್ಮ‌ಬಳಿ ಯಾರೂ ಕೂಡ ಈ ಕುರಿತು ಚರ್ಚಿಸಿಲ್ಲ ಕೇಶವಮೂರ್ತಿ ಬಿಟ್ಟು ಹೋದರೆ ನಮಗೇನು ನಷ್ಟವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ದರಿದ್ರವಿದೆ. ಕಾಂಗ್ರೆಸ್ ಗೂ ನಮಗೂ ಸರಿಸಾಟಿಯಲ್ಲ ಹೇಳಿಕೆಯನ್ನ ನಾವು ಒಪ್ಪಿಕೊಳ್ಳುತ್ತೇವೆ. ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಇಲ್ಲ. ಹೊಸ ಮುಖಗಳಿಗೆ ಅವಕಾಶ ಕೊಡುತ್ತೇವೆ. ಮುಖಂಡರನ್ನ ಹಿಡಿದಿಟ್ಟುಕೊಳ್ಳುವುದಿಲ್ಲ. ಇದು ರಾಜಕೀಯ ದ್ರುವೀಕರಣವಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಈ ನಡುವೆ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ 150 ಸ್ಥಾನ ಗೆಲ್ಲುತ್ತೇವೆ ಅಂತಾರೆ. ಸರ್ಕಾರ ಕೂಡ ಮುಂದೆ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ ಅಂತಾರೆ. ಆದರೆ ಈ ಸರ್ಕಾರದಲ್ಲಿ ಆಡಳಿತ ನಡೆಸುವವರು ವೀರಪ್ಪನ್ ಗಿಂತಲೂ ಕೆಟ್ಟಜನರಾಗಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ವಿರುದ್ದ ಲಂಚ ನೀಡಿದ ಆರೋಪ ಡೈರಿಯಲ್ಲಿ ಉಲ್ಲೆಖಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಡೈರಿ ಸೀಜ್ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.ಡೈರಿಯಲ್ಲಿ ಬರೆದಿರುವ ಮಾಹಿತಿಗಳು ಸತ್ಯ ಅಂತ ಒಪ್ಪಿಕೊಂಡಿದ್ದಾರೆ.ಹಣದ ಮಾಹಿತಿ ಬಗ್ಗೆ ತಿಳಿಸಿದ್ದಾರೆ.ಡೈರಿ ಮಾಹಿತಿ ಇಟ್ಟುಕೊಂಡು ಆರೋಪಿ ಮಾಡುವುದು ಅಸಾಧ್ಯ ಎಂದಿದ್ದಾರೆ ಎಂದು ಮಾಹಿತಿ ನೀಡಿದರು

 ಮಾರ್ಚ್ 15 ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್

 ಈ ಬಾರಿ ಚುನಾವಣೆ ಹಾಗೂ ಫಲಿತಾಂಶದಲ್ಲಿ ಯಾವ ಪಕ್ಷದ ಜತೆಯೂ ಒಪ್ಪಂದ‌ಮಾಡಿಕೊಳ್ಳಲ್ಲ.113 ಮ್ಯಾಜಿಕ್ ನಂಬರ್ ನಮ್ಮ‌ಗುರಿಯಾಗಿದ್ದು, ಎರಡು ಪಕ್ಷಗಳ‌ ಜೊತೆ ಸೇರಿ ನಾವು ಸರ್ಕಾರ ನಡೆಸಲ್ಲ ಎಂದ ಹೆಚ್ ಡಿಕೆ,ಮಾರ್ಚ್ 15 ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಾಗುತ್ತದೆ.ಇದರಲ್ಲಿ 124 ಅಭ್ಯರ್ಥಿಗಳ ಹೆಸರಿರುತ್ತೆ ಎಂದು ತಿಳಿಸಿದರು.


loading...

No comments