Breaking News

ರೌಡಿ ಶೀಟರ್ ಕಾಲಿಯಾ ಹತ್ಯೆ ನಾಲ್ವರ ಸೆರೆ


ಮಂಗಳೂರು : ಕುಖ್ಯಾತ ರೌಡಿ ಉಪ್ಪಳ ಬಪ್ಪಾಯಿತೋಟ ಕಾಲಿಯಾ ರಫೀಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಉಪ್ಪಳ ಮಣ್ಣಂಗುಳಿಯ ನೂರ್ ಅಲಿ, ಪೈವಳಿಕೆ ಬಾಯಿಕಟ್ಟೆಯ ಪದ್ದು ಯಾನೆ ಪದ್ಮನಾಭ, ಉಪ್ಪಳದ ರೌಫ್ ಯಾನೆ ಮೀಸೆ ರೌಫ್ ಹಾಗೂ ಇನ್ನೋರ್ವ ಉಳ್ಳಾಲ ನಿವಾಸಿಯನ್ನು ತನಿಖಾ ತಂಡ ಬಂಧಿಸಿದೆ.

ಈ ಪೈಕಿ ನೂರ್ ಅಲಿ ೨೦೧೩ರಲ್ಲಿ ಉಪ್ಪಳದಲ್ಲಿ ಕಾಲಿಯಾ ರಫೀಕ್‌ನಿಂದ ಕೊಲೆಗೀಡಾದ ಮುತ್ತಲಿಬ್‌ನ ಸಹೋದರನಾಗಿದ್ದಾನೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದ ಓರ್ವ ರಿವಾಲ್ವರ್ ಸಹಿತ ಉತ್ತರ ಭಾರತದತ್ತ ಪರಾರಿಯಾಗಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಬಂಧಿತರ ಮನೆ ಮತ್ತು ತಲೆ ಮರೆಸಿಕೊಂಡ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಪೊಲೀಸರು ಎರಡು ರಿವಾಲ್ವರ್, ಎರಡು ತಲವಾರು ಮೊದಲಾದ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಲಿಯಾ ರಫೀಕ್ ಸಂಚರಿಸುತ್ತಿದ್ದ ಕಾರನ್ನು ಬೆನ್ನಟ್ಟಿ ಬಂದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
-sanjevani


loading...

No comments