Breaking News

ಐವರು ಗೋ ಕಳ್ಳರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ನೀಡಿದ ನ್ಯಾಯಾಲಯ



ಮೂಡುಬಿದಿರೆ :  ಎರಡು ವರ್ಷಗಳ ಹಿಂದೆ ಚಿಕ್ಕ ಮಗಳೂರಿನ ಕೊಪ್ಪದಲ್ಲಿ ಗೋಕಳ್ಳತನ ಮಾಡಿ ಸಾಗುತ್ತಿದ್ದ ವೇಳೆಗೆ ತಡೆಯಲೆತ್ನಿಸಿದ ಪೋಲೀಸರ  ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆರು ಮಂದಿ ಪೈಕಿ ಐವರಿಗೆ ಸೆರೆವಾಸದ ಶಿಕ್ಷೆ ಪ್ರಕಟಿಸಿ ಚಿಕ್ಕ ಮಗಳೂರಿನ ಎರಡನೇ ಅಧಿಕ ಜಿಲ್ಲಾ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಆರು ಮಂದಿ ಪೈಕಿ ಓರ್ವ ತಲೆಮರೆಸಿಕೊಂಡಿದ್ದು ಎಲ್ಲರೂ ಮೂಡುಬಿದಿರೆಯವರಾಗಿದ್ದಾರೆ.

ಕಳೆದ 2014ರ ಸೆ 10ರಂದು ಚಿಕ್ಕಮಗಳೂರಿನ ಕೊಪ್ಪದ ಅಲ್ಲಮಕ್ಕಿಯ ಗ್ರಾಮದಲ್ಲಿನ ಮೂರು ಜಾನುವಾರುಗಳನ್ನು ಅಕ್ರಮವಾಗಿ ಪಿಕಪ್ಪಿನಲ್ಲಿ ಸಾಗಿಸಿ ಕೊಟ್ಟಿಗೆಹಾರ ಕಳಸದ ಬಳಿ ತಡೆಯಲೆತ್ನಿಸಿದ ಪೋಲೀಸರ ಮೇಲೆ ವಾಹನ ನುಗ್ಗಿಸಿ ಕೊಲೆಗೆ ಯತ್ನ ಮಾಡಲಾಗಿತ್ತು. ಮೂಡುಬಿದಿರೆಯ ಅಬ್ದುಲ್ ರಜಾಕ್, ಶರೀಫ್ ಅಲಿಯಾಸ್, ಮಹಮ್ಮದ್ ಶರೀಫ್, ಅಬ್ದುಲ್ ರಶೀದ್, ಅಲ್ತಫ್, ಮಹಮ್ಮದ್ ಆರಿಶ್, ಹುಸೇನ್ ಆರೋಪಿಗಳಾಗಿದ್ದರು.  ಈ ನಡುವೆ ಪೋಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬಾಳೂರಿನ ಕಾಳಿಕಟ್ಟೆ ಬಳಿ ದನಗಳನ್ನು ಬಿಸಾಕಿದ್ದು ಈ ಪೈಕಿ ಎರಡು ದನಗಳು ಮೃತಪಟ್ಟಿದ್ದು ಒಂದು ತೀವ್ರವಾಗಿ ಗಾಯಗೊಂಡಿತ್ತು.

ತಲೆ ಮರೆಸಿಕೊಂಡಿರುವ ಹುಸೈನ್ ಹೊರತುಪಡಿಸಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಐದು ಮಂದಿಗೆ ತಲಾ ಎರಡು ವರ್ಷಗಳ ಜೈಲು ಶಿಕ್ಷೆ, 5 ಸಾವಿರ ರೂಗಳ ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ ಮೂರು ತಿಂಗಳ ಜೈಲು, ಕರ್ತವ್ಯ ಅಡ್ಡಿಪಡಿಸಿದ್ದಕ್ಕಾಗಿ  ತಲಾ ಐದು ಸಾವಿರ ರೂ ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆಯ ತೀರ್ಪು ನೀಡಲಾಗಿದೆ.
-k-ale

loading...

No comments