Breaking News

ಜಿಯೋ ಉದ್ಯಮಕ್ಕೆ ರಿಲಯನ್ಸ್ ವ್ಯಯಿಸಿದ ಹಣವೆಷ್ಟು ಗೊತ್ತೇ.?

ನವದೆಹಲಿ : ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿ ತನ್ನ 4ಜಿ ಸೇವೆಯಲ್ಲಿ ಉಚಿತ ಡಾಟಾ, ಕರೆಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವ ಮೂಲಕ ಹೆಸರು ವಾಸಿಯಾಗಿದೆ. ಸೆಪ್ಟೆಂಬರ್ 5ರಂದು ಪ್ರಾರಂಭವಾದ ಈ ಉಚಿತ ಸೌಲಭ್ಯ ಡಿಸೆಂಬರ್ 31ಕ್ಕೆ ಕೊನೆಗೊಳ್ಳುವುದಿತ್ತು ಆದರೆ ನ್ಯೂ ಇಯರ್ ಆಫರ್ ಎಂದು ಉಚಿತ ಸೇವೆಯನ್ನು ಮಾರ್ಚ್ 31ರವರೆಗೆ ಮುಂದೂಡಲಾಗಿತ್ತು.
ಜಗತ್ತಿನಲ್ಲಿಯೇ ಅತೀ ದೊಡ್ಡ 4ಜಿ ಎಲ್‌ಟಿಇ ನೆಟ್‌ವರ್ಕ್ ರಿಲಯನ್ಸ್ ಜಿಯೋದ್ದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಜಿಯೋ ಉದ್ಯಮಕ್ಕಾಗಿ ಈಗಾಗಲೇ 1.5ಲಕ್ಷ ಕೋಟಿಗಳನ್ನು ವ್ಯಯಿಸಿದೆ ಎಂದು ಬ್ಯುಸಿನೆಸ್ ಟುಡೆ ಹೇಳಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಮೂರು ವರ್ಷಗಳಲ್ಲಿ ವಿವಿಧ ಉದ್ಯಮಗಳಿಗೆ ಹೂಡಿಕೆ ಮಾಡಿದ ಹಣ ಹಿಂದಿನ 35ವರ್ಷಗಳ ಹೂಡಿಕೆ ಮಾಡಿದ ಹಣಕ್ಕೆ ಸಮವಾಗಿದೆ.
ಕೇವಲ 170 ದಿನಗಳಲ್ಲೇ 10ಕೋಟಿಗಿಂತಲೂ ಅಧಿಕ ಗ್ರಾಹಕರು ಜಿಯೋ ಚಂದಾದಾರರಾಗಿದ್ದಾರೆ ಅಲ್ಲದೆ  ಪ್ರತಿ ಸೆಕೆಂಡಿಗೆ ರಿಲಯನ್ಸ್ ಜಿಯೋ 7 ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಮುಂದಿನ ಏಪ್ರಿಲ್ ಒಂದರಿಂದ ಗ್ರಾಹಕರು ಜಿಯೋದ ಡಾಟಾ ಸೇವೆಗೆ ಹಣ ವ್ಯಯಿಸಬೇಕಾಗಿದ್ದು ಭಾರತದಾದ್ಯಂತ ಕರೆಗಳು ಉಚಿತವಾಗಿರಲಿದೆ ಅಲ್ಲದೆ ಗ್ರಾಹಕರು ಯಾವುದೇ ರೋಮಿಂಗ್ ಚಾರ್ಜ್ ತೆರಬೇಕಾಗಿಲ್ಲ.
loading...

No comments