ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ, ಕಾಮುಕ ಮೌಲ್ವಿಗೆ ಬಿತ್ತು ಧರ್ಮದೇಟು.
ಭಾಗಪತ್ : ಉತ್ತರಪ್ರದೇಶದ ಭಾಗಪತ್ ನಲ್ಲಿ ಚಲಿಸುವ ಬಸ್ ನಲ್ಲಿ ಮೌಲ್ವಿಯೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ಥಿಸಿದ್ದು, ಮಹಿಳೆ ಮೌಲ್ವಿಯನ್ನು ಬಸ್ಸಿನಿಂದ ಹೊರಗೆಳೆದು ಯದ್ವಾತದ್ವಾ ಭಾರಿಸಿದ್ದಾಳೆ. ಮಹಿಳೆಗೆ ಸ್ಥಳೀಯರು ಸಾಥ್ ನೀಡಿದ್ದು ಕಾಮುಕ ಮೌಲ್ವಿಗೆ ಧರ್ಮದೇಟು ನೀಡಿದ್ದಾರೆ.
ಮೌಲ್ವೀ ಮೊದಲಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ, ಈತನ ದುರ್ವರ್ತನೆಯನ್ನು ಕಂಡು ಆಕೆ ದೂರ ಹೋಗಿದ್ದು ನಂತರ ಅಲ್ಲೇ ಇದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಮೌಲ್ವಿಯ ವರ್ತನೆಯಿಂದ ಕೋಪಗೊಂಡ ಮಹಿಳೆ ಸುಮ್ಮನಾಗದೆ ಚಪ್ಪಲಿಯಿಂದ ಭಾರಿಸಿದ್ದಾಳೆ. ನಂತರ ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರೂ ಕಾಮುಕನಿಗೆ ಭಾರಿಸಿದ್ದಾರೆ. ನಂತರ ಕಂಡಕ್ಟರ್ ಎಲ್ಲರನ್ನೂ ಬಸ್ಸಿನಿಂದ ಕೆಳಗಿಳಿಸಿದ್ದು, ಬಸ್ಸಿನಿಂದ ಕೆಳಗಿಳಿದ ನಂತರವೂ ಮೌಲ್ವಿಗೆ ಚಪ್ಪಲಿ ಏಟು ಬೀಳುವುದು ಮುಂದುವರೆದಿತ್ತು. ನಂತರ ಸ್ಥಳೀಯ 'ಕೋತವಾಲಿ' ಠಾಣೆ ಪೋಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಪೋಲೀಸರ ವಿಚಾರಣೆಯಲ್ಲಿ ಆರೋಪಿಯ ಹೆಸರು ಸಮೀರ್ ಎಂದು ತಿಳಿದುಬಂದಿದೆ. ಉತ್ತರಪ್ರದೇಶದ ಶಾಮ್'ಲಿ ಜಿಲ್ಲೆಯ ಹಸನ್ ಪುರ ಗ್ರಾಮದ ನಿವಾಸಿಯಾದ ಸಮೀರ್ ದೆಹಲಿಯ ಶಹದಾರ ನಗರದ ನಂದನಗರಿ ಎಂಬಲ್ಲಿನ ಮಸೀದಿಯ ಮೌಲ್ವಿಯಾಗಿದ್ದಾನೆ. ಮಹಿಳೆ ಆರೋಪಿಯ ವಿರುದ್ಧ ಕಿರುಕುಳದ ಕೇಸು ನೀಡಿದ್ದು ಕೋತವಾಲಿ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೌಲ್ವಿಗೆ ಮಹಿಳೆ ಹಾಗೂ ಸಾರ್ವಜನಿಕರು ಸೇರಿ ಥಳಿಸುತ್ತಿರುವ ದೃಷ್ಯ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೋಲೀಸರು ಸಿಸಿಟಿವಿ ದೃಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆ ದೆಹಲಿಯ ನಿವಾಸಿಯಾಗಿದ್ದು ಯಾವುದೋ ಪ್ರಕರಣದ ವಿಚಾರಣೆಗಾಗಿ ಕೋರ್ಟ್ ಗೆ ತೆರಳುತ್ತಿದ್ದರು.
ವೀಡಿಯೋ ನೋಡಿ :
ವೀಡಿಯೋ ನೋಡಿ :
No comments