ವಿಮಾನದ ಟೈರ್ ಸ್ಫೋಟ; ಮಂಗಳೂರು ವಿಮಾನ ನಿಲ್ದಾಣ ಸ್ಥಗಿತ
ಮಂಗಳೂರು: ನೌಕಾಪಡೆಯ ಸಿಬ್ಬಂದಿಗೆ ತರಬೇತಿ ನೀಡಲು ಬಳಸುತ್ತಿದ್ದ ಮಿಗ್– 29 ವಿಮಾನವೊಂದು ತುರ್ತು ಭೂಸ್ಪರ್ಶ ಮಾಡುತ್ತಿದ್ದ ವೇಳೆ ಅದರ ಟೈರ್ ಸ್ಫೋಟಗೊಂಡಿರುವ ಕಾರಣದಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಮಂಗಳವಾರ ಸಂಜೆ ನೌಕಾಪಡೆ ಸಿಬ್ಬಂದಿ ತರಬೇತಿಯಲ್ಲಿದ್ದ ವೇಳೆ ಮಿಗ್–29 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ತುರ್ತು ಭೂಸ್ಪರ್ಶಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಂಜೆ 5.35ಕ್ಕೆ ವಿಮಾನ ಇಳಿಯುತ್ತಿದ್ದಾಗ ಟೈರ್ ಸ್ಫೋಟಗೊಂಡು ರನ್‌ವೇ ನಡುವೆ ನಿಂತಿದೆ.
ಈ ಕಾರಣದಿಂದ ಇತರೆ ವಿಮಾನಗಳು ಪ್ರಯಾಣ ಆರಂಭಿಸಲು ಮತ್ತು ಭೂಸ್ಪರ್ಶ ಮಾಡಲು ಅವಕಾಶವಿಲ್ಲದಂತಾಗಿದೆ. ಸಂಜೆ ಇಲ್ಲಿಗೆ ಬರಬೇಕಿದ್ದ ಕೆಲವು ವಿಮಾನಗಳನ್ನು ಮಾರ್ಗ ಬದಲಾವಣೆ ಮಾಡಿ, ಬೆಂಗಳೂರು ಸೇರಿದಂತೆ ಬೇರೆ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ.
-prajavani
-prajavani
loading...
No comments