Breaking News

7 ಲಕ್ಷಕ್ಕೂ ಹೆಚ್ಚು ಬೇನಾಮಿ ಕಂಪನಿಗಳ ಮುಚ್ಚಲು ಕ್ರಮಕೈಗೊಂಡ ಕೇಂದ್ರ ಸರ್ಕಾರ



ಕಾಳಧನದ ವಿರುದ್ಧ ಸಮರ ಸಾರಿದ ಕೇಂದ್ರ ಸರ್ಕಾರ

ನವದೆಹಲಿ : ಐನೂರು ಮತ್ತು ಸಾವಿರ ರೂಪಾಯಿ ಮೌಲ್ಯದ ನೋಟ್ ಬ್ಯಾನ್ ಮಾಡಿ ಸದ್ದು ಮಾಡಿದ ಕೇಂದ್ರ ಸರ್ಕಾರ ಕಾಳಧನದ ವಿರುದ್ಧ ಸಮರದ ವ್ಯಾಪ್ತಿಯನ್ನು ವಿಸ್ತರಿಸಿ ಬೇನಾಮಿ ಕಂಪನಿಗಳನ್ನು ಮುಚ್ಚುವ ಮೂಲಕ ಸಾಂಸ್ಥಿಕ ಅಕ್ರಮ ಹಣ ವರ್ಗಾವಣೆಗೂ ಕಡಿವಾಣ ಹಾಕಲು ಮುಂದಾಗಿದೆ.

6 ರಿಂದ 7 ಲಕ್ಷ ಸಂಖ್ಯೆಯಲ್ಲಿ ಇರುವ ನಿಷ್ಕ್ರಿಯ ಕಂಪನಿಗಳನ್ನು ಮುಚ್ಚಲು ಸರಕಾರ ಉದ್ದೇಶಿಸಿದೆ. ಈ ಕಂಪನಿಗಳು ನೋಟು ಅಮಾನ್ಯೀಕರಣದ ಬಳಿಕ ಭಾರೀ ಮೌಲ್ಯದ ಹಣ ವರ್ಗಾವಣೆ ನಡೆಸಿದ್ದು, ಬೃಹತ್‌ ಮೊತ್ತದ ನಗದನ್ನು ಬ್ಯಾಂಕ್‌ ಖಾತೆಗಳಿಗೆ ಠೇವಣಿ ಮಾಡಿವೆ.15 ಲಕ್ಷ ನೋಂದಾಯಿತ ಕಂಪನಿಗಳ ಪಟ್ಟಿಯನ್ನು ಶುದ್ಧೀಕರಿಸುವುದೇ ದೊಡ್ಡ ಸವಾಲಾಗಿದ್ದು, ದೇಶದಲ್ಲಿ ಶಂಕಿತ ಕಂಪನಿಗಳ ಪ್ರಮಾಣವೇ ಶೇ 40ರಷ್ಟಿದೆ.ಹೆಸರಿಗಷ್ಟೇ ಇರುವ ರಹಸ್ಯ ಕಂಪನಿಗಳು ವಾಸ್ತವದಲ್ಲಿಯಾವುದೇ ವಾಣಿಜ್ಯ ಕಾರ್ಯಾಚರಣೆ ಅಥವಾ ಸಂಪತ್ತು ಹೊಂದಿಲ್ಲ. ಅವುಗಳನ್ನು ಕೇವಲ ಗ್ರಾಹಕರ ಪರವಾಗಿ ಹಣ ವರ್ಗಾಯಿಸಲು ಮಾತ್ರ ಬಳಸಲಾಗುತ್ತದೆ.

ಸಿಬಿಡಿಟಿ ಶಂಕಿತ ಗುಪ್ತ ಕಂಪನಿಗಳು ಹಾಗೂ ಎಂಟ್ರಿ ಆಪರೇಟರ್‌ಗಳ ಬಗ್ಗೆ ಸಮಗ್ರ ಡಾಟಾಬ್ಯಾಂಕ್‌ ರೂಪಿಸಿದ್ದು, ಅವುಗಳ ಇತ್ತೀಚಿನ ಬ್ಯಾಂಕಿಂಗ್‌ ವಹಿವಾಟುಗಳನ್ನು ಪರಿಶೀಲಿಸುತ್ತಿದೆ. ಆಸ್ತಿಗಳ ನೋಂದಣಿ, ಹಣಕಾಸು ಗುಪ್ತಚರ ಇಲಾಖೆ ನೀಡಿದ ಶಂಕಿತ ಹಣ ವರ್ಗಾವಣೆ ವರದಿಗಳು ಹಾಗೂ ವಿದೇಶಿ ಬ್ಯಾಂಕ್‌ ಖಾತೆಗಳ ವಹಿವಾಟು ವರದಿಗಳನ್ನು ಸಿಬಿಡಿಟಿ ಹದ್ದಿನಗಣ್ಣಿಟ್ಟು ಪರಿಶೀಲಿಸುತ್ತಿದೆ. ನಂತರ ಶಂಕಿತ ಕಂಪನಿಗಳನ್ನು ಅವುಗಳ ಪಾನ್‌ ನಂಬರ್‌ ಹಾಗೂ ನೋಂದಾಯಿತ ವಿಳಾಸಗಳ ಆಧಾರದಲ್ಲಿ ಗುರುತಿಸಲಾಗುತ್ತದೆ.ಈ ಎಲ್ಲಾ ಕ್ರಮಗಳಿಂದ ದೇಶದಲ್ಲಿ 'ಸಾಂಸ್ಥಿಕ ಅಕ್ರಮ ಹಣ ವರ್ಗಾವಣೆ'ಯ ಪಿಡುಗಿಗೆ ಶಾಶ್ವತ ತೆರೆ ಬೀಳಲಿದೆ.
vk

loading...

No comments