Breaking News

ಗಣೇಶನ ವಿಗ್ರಹ ವಿರೂಪಗೊಳಿಸಿದ ಕಿಡಿಗೇಡಿಗಳು : ಮುನಿರೆಡ್ಡಿಪಾಳ್ಯ ಉದ್ವಿಗ್ನ

ಬೆಂಗಳೂರು : ಬೆಂಗಳೂರಿನ ಮುನಿರೆಡ್ಡಿ ಪಾಳ್ಯದ ಮುಖ್ಯ ರಸ್ತೆಯಲ್ಲಿರುವ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿದ್ದ ಗಣಪತಿ ಹಾಗೂ ಶಿವ ಪಾರ್ವತಿಯ ವಿಗ್ರಹಗಳಿಗೆ ದುಷ್ಕರ್ಮಿಗಳು ಹಾನಿಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.

ಮಹಾಗಣಪತಿ ದೇವಾಲಯದ ಮುಂಭಾಗದಲ್ಲಿರುವ ಗೋಡೆಯ ಬಳಿ ಇದ್ದ ಗಣೇಶ ಹಾಗೂ ಶಿವ-ಪಾರ್ವತಿಯ ವಿಗ್ರಹಗಳನ್ನು ಅಳವಡಿಸಲಾಗಿತ್ತು.ಇಂದು ಮುಂಜಾನೆ 4ಗಂಟೆ ಸಮಯಕ್ಕೆ ದುಷ್ಕರ್ಮಿಗಳು ಗಣಪತಿ ವಿಗ್ರಹದ ಸೊಂಡಿಲು, ಕೈಗಳನ್ನು ಮುರಿದು, ಶಿವ-ಪಾರ್ವತಿ ವಿಗ್ರಹಕ್ಕೂ ಹಾನಿ ಮಾಡಿ ವಿರೂಪಗೊಳಿಸಿ ಪರಾರಿಯಾಗಿದ್ದರು.
ವಿಗ್ರಹ ವಿರೂಪಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆ ದೇವಾಲಯದ ಭಕ್ತರು ದೇವಾಲಯದ ಮುಂದೆ ಜಮಾವಣೆಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು, ತಕ್ಷಣ ಏನೂ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಭದ್ರತೆಗಾಗಿ ಹೆಚ್ಚಿನ ಪೋಲೀಸರನ್ನು ನಿಯೋಜಿಸಲಾಯಿತು.

ವಿಗ್ರಹಗಳನ್ನು ವಿರೂಪಗೊಳಿಸಿದ ಮೂವರು ಕಿಡಿಗೇಡಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು ಮತ್ತೊಬ್ಬನ ಬಂಧನಕ್ಕೆ ಬಲೆಬೀಸಲಾಗಿದೆ.ಸ್ಥಳಕ್ಕೆ ಭೇಟಿನೀಡಿದ್ದ ಪೋಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಶಾಂತಿ ಕಾಪಾಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ, ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
loading...

No comments