Breaking News

ಪತ್ರಿಕಾಗೋಷ್ಟಿಯಲ್ಲಿ ಮತ್ತೆ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ.

ಉತ್ತರ ಪ್ರದೇಶ : ಕಾಂಗ್ರೆಸ್ ಉಪಾಧ್ಯಕ್ಷ ಇಂದು ಪತ್ರಿಕಾಗೋಷ್ಟಿ ನಡೆಸುವ ಸಂದರ್ಭದಲ್ಲಿ ಮತ್ತೆ ಎಡವಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆ ಪತ್ರಿಕಾಗೋಷ್ಟಿ ನಡೆಸಿದ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಒಟ್ಟು ಎಷ್ಟು ವಿಧಾನ ಸಭಾ ಕ್ಷೇತ್ರಗಳಿವೆ ಎಂಬುದನ್ನೇ ಮರೆತರು.

"ಉತ್ತರ ಪ್ರದೇಶದಲ್ಲಿ 400 ಸ್ಥಾನಗಳಿವೆ" ಎಂದು ರಾಹುಲ್ ಗಾಂಧಿ ಮಾತು ಪ್ರಾರಂಭಿಸುತ್ತಿದ್ದಂತೆ ಅರ್ಧದಲ್ಲೇ ತಡೆದ ಅಖಿಲೇಶ್ ಯಾದವ್ 400 ಅಲ್ಲ 403 ಎಂದು ಹೇಳಿದರು. ತಪ್ಪನ್ನು ಸರಿಪಡಿಸಿ ಮಾತು ಮುಂದುವರೆಸಿದ ರಾಹುಲ್ ಗಾಂಧಿ 403 ಸ್ಥಾನಗಳಲ್ಲಿ 99% ಸ್ಥಾನಗಳಲ್ಲಿ ಯಾವುದೇ ತೊಂದರೆಯಿಲ್ಲ.ನಮ್ಮ ಮೈತ್ರಿಯಲ್ಲಿ ಇದ್ದ ಎಲ್ಲ ಅಡ್ಡಿಗಳನ್ನು ನಿವಾರಿಸಿದ್ದೇವೆ. ನಾವು ಒಂದಾಗಿ ಚುಣಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದರು. ನಮ್ಮ ಮೈತ್ರಿಯಲ್ಲಿ ಹೊಂದಾಣಿಕೆಯಿಲ್ಲ ಎಂಬುದೆಲ್ಲಾ ಸುಳ್ಳು ಎಂದರು.

ವೀಡಿಯೋ ನೋಡಿ :
loading...

No comments