Breaking News

ಸೂಡಾನ್ ನಲ್ಲಿ ಹತ್ಯೆಯಾದ ಗಂಗಾವತಿ ಮೂಲದ ವ್ಯಕ್ತಿಯ ಕುಟುಂಬದ ನೆರವಿಗೆ ಧಾವಿಸಿದ ಸುಷ್ಮಾ ಸ್ವರಾಜ್.

ನವದೆಹಲಿ : ದಕ್ಷಿಣ ಸೂಡಾನ್ ನಲ್ಲಿ ಗಂಗಾವತಿ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದು. ಮೃತ ದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ಮೃತನ ಕುಟುಂಬಸ್ತರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದರು. ಈಗ ಸುಷ್ಮಾ ಸ್ವರಾಜ್ ಮೃತನ ಕುಟುಂಬದ ನೆರವಿಗೆ ಬಂದಿದ್ದಾರೆ, ದಕ್ಷಿಣ ಸೂಡಾನ್ ನಲ್ಲಿರುವ ಭಾರತೀಯ ರಾಯಭಾರಿ ಕಛೇರಿ ಅಧಿಕಾರಿಗಳಿಗೆ ಹತ್ಯೆಯಾದ ವ್ಯಕ್ತಿಯ ಮೃತ ದೇಹವನ್ನು ಭಾರತಕ್ಕೆ ತರಲು ಸಹಕರಿಸುವಂತೆ ಸೂಚನೆ ನೀಡಿದ್ದಾರೆ.

ಸುಡಾನ್ ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಫರೂಕ್ ಬಾಷಾ (23) ಫೆ.17ರಂದು ಶುಕ್ರವಾರ ಮಸೀದಿಗೆ ನಮಾಜ್ ಮಾಡಲೆಂದು ತೆರಳಿದ್ದರು. ನಮಾಜ್ ಮುಗಿಸಿ ತಮ್ಮ ಕಾರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರು ತಡೆದಿದ್ದಾರೆ, ಆದರೆ ಬಾಷಾ ಕಾರು ನಿಲ್ಲಿಸದೆ ಮುಂದೆ ಚಲಿಸಿದ್ದರು. ನಂತರ ದುಷ್ಕರ್ಮಿಗಳು ಏಕಾಏಕಿ ಬಾಷಾ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸೈಯದ್ ಬಾಷಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ವಿಷಯ ತಿಳಿದ ಸೈಯದ್ ಬಾಷಾ ಕುಟುಂಬಸ್ತರು ಆತನ ಮೃತದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದರು. ಮನವಿಗೆ ಸ್ಪಂದಿಸಿದ ವಿದೇಶಾಂಗ ಸಚಿವೆ ಸುಷ್ಮಾ ಅಧಿಕಾರಿಗಳಲ್ಲಿ ಮೃತನ ಕುಟುಂಬಕ್ಕೆ ನೆರವಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
loading...

No comments