ಅಪರಚಿತ ಗಂಡಸಿನ ಶವ ಪತ್ತೆ,ಕೊಲೆ ಶಂಕೆ
ಉಡುಪಿ : ನಗರದ ಸಿಟಿ ಬಸ್ ನಿಲ್ದಾಣ ಬಳಿಯ ಬನ್ನಂಜೆ ಎಚ್ ಎಂ ಟಿ ಗ್ಯಾರೇಜ್ ಬಳಿಯ ಪೊದೆಯೊಂದರಲ್ಲಿ ಅಪರಿಚಿತ ಗಂಡಸಿನ ಶವವೊಂದು ಶುಕ್ರವಾರ ಪತ್ತೆಯಾಗಿದ್ದು, ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ವ್ಯಕ್ತಿಯ ಪ್ರಾಯವು 35ರಿಂದ 40 ವರ್ಷ ಇರಬಹುದು. ಶವವು ಕೊಳೆತು ಹೋಗಿದ್ದು ಸ್ವಲ್ಪ ದೂರದಲ್ಲಿ ಇಸ್ಪೀಟು ಎಲೆಗಳು ಪತ್ತೆಯಾಗಿದೆ. ಇಲ್ಲಿ ಜುಗಾರಿಕೋರರು ಇಸ್ಪೀಟು ಜುಗಾರಿ ಆಟವಾಡಿ ವ್ಯಕ್ತಿಯನ್ನು ಕೊಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. ಶವವನ್ನು ಉಡುಪಿ ಜಿಲ್ಲಾ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷಾ ವರದಿಯಿಂದ ಕೊಲೆಯೋ, ಆತ್ಮಹತ್ಯೆಯೋ ಎಂಬುದು ತಿಳಿದು ಬರಲಿದೆ. ಸ್ಥಳಕ್ಕೆ ಉಡುಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
-k ale
loading...
No comments