ಶಿರಸಿ ಬುರ್ಖಾ vs ಕೇಸರಿ ಶಾಲು ವಿವಾದ
ಶಿರಸಿ: ತರಗತಿಗೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಕಟ್ಟಿಕೊಂಡು ಬರುತ್ತಾರೆ ಎಂದು ವಿರೋಧಿಸಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಯಲ್ಲಿ ಕುಳಿತ ಘಟನೆ ನಗರದ ಪ್ರತಿಷ್ಠಿತ ಎಮ್ಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ನಡೆದಿದೆ.
ಬುರ್ಖಾ ಧರಿಸಿಕೊಂಡು ಬರುವ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ತೆರಳುವಾಗ ಬುರ್ಖಾ ತೆಗೆದಿಟ್ಟು ಹಾಜರಾಗುತ್ತಾರೆ. ಆದರೆ ಕೆಲ ವಿದ್ಯಾರ್ಥಿನಿಯರು ಮಾತ್ರ ಸ್ಕಾರ್ಫ್ ಧರಿಸಿಕೊಂಡೇ ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಹಾಗಾಗಿ ನಾವೂ ಸಹ ಕೇಸರಿ ಶಾಲನ್ನು ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದೇವೆ ಎಂಬುದು ವಿದ್ಯಾರ್ಥಿಗಳ ಮಾತಾಗಿದೆ.
ಈ ಕುರಿತು ವಿದ್ಯಾಲಯದ ಪ್ರಾಂಶುಪಾಲ ರವಿ ನಾಯ್ಕ ಮಾತನಾಡಿ, ಇಸ್ಲಾಂ ವಿದ್ಯಾರ್ಥಿನಿಯರು ತರಗತಿಯಲ್ಲಿ ಬುರ್ಖಾ ಹಾಕ್ತಾ ಇಲ್ಲಾ. ಬದಲಾಗಿ ಸ್ಕಾರ್ಫ್ ಹಾಕಿಕೊಂಡು ಬರ್ತಾ ಇದ್ದಾರೆ. ಇಂದು ವಿದ್ಯಾರ್ಥಿಗಳು ಯಾವುದೇ ಪೂರ್ವ ಮಾಹಿತಿ ಇಲ್ಲದೇ ಕೇಸರಿ ಶಾಲು ಧರಿಸಿಕೊಂಡು ಬಂದಿದ್ದಾರೆ. ಇಂತಹ ಸ್ಕಾರ್ಫ್ ಧರಿಸುವ ವಿಚಾರದಲ್ಲಿ ಮತ್ತು ವಸ್ತ್ರ ಸಂಹಿತೆಯ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಯಾವುದೇ ಮಾಹಿತಿ ಇರದ ಕಾರಣ ಕ್ರಮ ಕೈಗೊಳ್ಳುವ ಅವಕಾಶವಿಲ್ಲ. ವಿದ್ಯಾಲಯದ ನಿಯಮದ ಪ್ರಕಾರ ವಾರದಲ್ಲಿ 4 ದಿನ ವಸ್ತ್ರ ಸಂಹಿತೆ, ಇದ್ದು ಉಳಿದೆರಡು ದಿನ ಡ್ರೆಸ್ ಕೋಡ್ ಗೆ ಅನುಗುಣವಾಗುವಂತೆ ಬಟ್ಟೆಗಳನ್ನು ಧರಿಸಬಹುದಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಹಾಕೊದನ್ನ ನಿಲ್ಲಿಸಿದರೆ ಮಾತ್ರ ಕೇಸರಿ ಶಾಲು ತೆಗೆಯುವುದಾಗಿ ಹಟ ನಿರತ ವಿದ್ಯಾರ್ಥಿಗಳು ಹೇಳಿರುತ್ತಾರೆ. ಈ ಕೂಡಲೇ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕರೆಸಿ ಅವರೊಡನೆ ಸಮಾಲೋಚನೆ ನಡೆಸುವುದರ ಜೊತೆಗೆ ಆಡಳಿತ ಮಂಡಳಿಯೊಡನೆ ಮಾತನಾಡಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
Sirasi now
loading...
No comments