Breaking News

ಮಗು ಅಳುತ್ತಿರುವುದರಿಂದ ಸಿಟ್ಟಿಗೆದ್ದು ಮಗುವಿನ ಕಾಲನ್ನೇ ಮುರಿದ ಹಾಸ್ಪಿಟಲ್ ಗಾರ್ಡನ್.

ಉತ್ತರಖಂಡ : ಹರಿದ್ವಾರ ಜಿಲ್ಲೆಯ ರೂರ್ಕೀಯಿಂದ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ. ಇಲ್ಲಿಯ ಖಾಸಗೀ ಮಕ್ಕಳ ಆಸ್ಪತ್ರೆಯ ವಾರ್ಡನ್ ಒಬ್ಬ ಎರಡು ದಿನಗಳ ಪುಟ್ಟ ಹಸುಳೆಯ ಕಾಲನ್ನು ಮುರಿದ ಪ್ರಕರಣ ನಡೆದಿದೆ. ಕಳೆದ ಜನವರಿ 28ರಂದು ಘಟನೆ ನಡೆದಿದ್ದು ಜನವರಿ 26ರಂದು ಮಗುವಿನ ಜನನವಾಗಿತ್ತು.

ಮಗುವಿಗೆ ಉಸಿರಾಟದ ತೊಂದರೆಯಿದ್ದುದರಿಂದ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಇರಿಸಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಮಗುವನ್ನು ನೋಡಿಕೊಳ್ಳಲು ಬಿಟ್ಟಿದ್ದ ವಾರ್ಡ್ ಬಾಯ್ ಈ ಹೀನ ಕೃತ್ಯ ಮಾಡಿದಾತ. ಮಗು ಬಿಡದೆ ಬಿಕ್ಕಿಬಿಕ್ಕಿ ಅಳಿತ್ತಿರುವುದರಿಂದ ಸಿಟ್ಟಿಗೆದ್ದ ವಾರ್ಡ್ ಬಾಯ್ ಮಗುವಿನ ಒಂದು ಕಾಲು ಮುರಿದು ಹಾಕಿದ್ದ. ಆದರೆ ಘಟನೆ ಬಗ್ಗೆ ಯಾರಿಗೂ ಗೊತ್ತಾಗಿರಲಿಲ್ಲ.

ಸಿಸಿಟಿವಿ ಯಲ್ಲಿ ಸೆರೆಯಾದ ಹೀನ ಕೃತ್ಯ :

ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಡೆಹ್ರಾಡೂನ್ ನ ಬೇರೆ ಆಸ್ಪತ್ರೆಯಲ್ಲಿ ದಾಖಲಿಸಿ ಪರಿಶೀಲಿಸಿದಾಗ ಮಗುವಿನ ಒಂದು ಕಾಲು ಮುರಿತಕ್ಕೊಳಗಾಗಿರುವುದು ಪತ್ತೆಯಾಗಿದೆ.ನಂತರ ಮೊದಲು ದಾಖಲಾಗಿದ್ದ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದರಲ್ಲಿ ವಾರ್ಡ್ ಬಾಯ್ ಮಗುವಿನ ಕಾಲು ಮುರಿಯುತ್ತಿರುವ ದೃಶ್ಯಗಳು ದಾಖಲಾಗಿತ್ತು.

ಮಗುವಿನ ತಂದೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಕಠಿಣ ಕ್ರಮ ಜರುಗಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
loading...

No comments