ಏಡ್ಸ್ ಪೀಡಿತ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದಾಗ ಏನಾಯಿತು
ಬೆಂಗಳೂರು : ಏಡ್ಸ್ ಪೀಡಿತ 47ರ ಹರೆಯದ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ಆಕೆ ಆತನ ಗುಪ್ತಾಂಗಕ್ಕೆ ತುಳಿದುದರಿಂದ ಆತ ಮೃತಪಟ್ಟ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕವಿಕಾ ಲೇಔಟಿನಲ್ಲಿ ನಡೆದಿದೆ.
ಮೃತ ವ್ಯಕ್ತಿ ಉದಯ ಎಂದು ಹೇಳಲಾಗಿದೆ. ಈತ ವೃತ್ತಿಯಲ್ಲಿ ಕಾರು ಚಾಲಕ. ಆರೋಪಿ ಪತ್ನಿ ನಿರ್ಮಲಾಳನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.
17 ವರ್ಷದ ಹಿಂದೆ ವಿವಾಹವಾಗಿದ್ದ ಇವರು ಮಡಿಕೇರಿಯಿಂದ ಇಲ್ಲಿಗೆ ಆಗಮಿಸಿ ವಾಸಿಸುತ್ತಿದ್ದರು. ದಂಪತಿಗೆ 14 ವರ್ಷದ ಪುತ್ರನೊಬ್ಬನಿದ್ದಾನೆ. ನಿನ್ನೆ ಮದ್ಯ ಸೇವಿಸಿ ಆಗಮಿಸಿದ ಉದಯ್, ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ. ಆದರೆ ಆತ ಎಚ್‍ಐವಿ ರೋಗಿಯಾಗಿರುವುದರಿಂದ ಆಕೆ ನಿರಾಕರಿಸಿದಳು. ಬಳಿಕ ಇಬ್ಬರ ಮಧ್ಯೆ ಜಗಳ ನಡೆಯಿತು.
ಆಕೆಗೆ ಪರಪುರುಷರೊಂದಿಗೆ ಸಂಬಂಧವಿದೆ ಎಂದು ಬೈಯುತ್ತಿದ್ದಾಗ ಕುಪಿತಗೊಂಡ ಆಕೆ, ಪತಿಯ ಖಾಸಗಿ ಭಾಗಕ್ಕೆ ಒದೆದಿದ್ದಾಳೆ. ಆಗ ಕುಸಿದು ಬಿದ್ದ ಆತ ಬಳಿಕ ಎದ್ದೇ ಇಲ್ಲ. ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನವಾಗಿಲ್ಲ. ಕಾಂಡೋಂ ಹಾಕಿಕೊಂಡು ಸೆಕ್ಸ್ ಮಾಡಲು ಸೂಚಿಸಿದರೂ ಆತ ಕೇಳಲಿಲ್ಲ ಎಂದಾಕೆ ಪೊಲೀಸರೆದುರು ಹೇಳಿದ್ದಾಳೆ
loading...
No comments