Breaking News

ಮ್ಯಾನ್ ಹೋಲ್‌ಗೆ ದುರಂತ 3 ಕಾರ್ಮಿಕರು ಉಸಿರುಗಟ್ಟಿ ಸಾವು


ಬೆಂಗಳೂರು : ದುರಸ್ತಿಗಾಗಿ ಮ್ಯಾನ್ ಹೋಲ್‌ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಸಿ.ವಿ.ರಾಮನ್ ನಗರದ ಕಗ್ಗದಾಸಪುರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಮೃತರನ್ನು ಆಂಧ್ರಮೂಲದ ವೀರಯ್ಯ(೩೫)ಆಂಜನೇಯ ರೆಡ್ಡಿ(೩೪) ಹಾಗೂ ಧವಂತಿ ನಾಯ್ದು(೪೦) ಎಂದು ಗುರುತಿಸಲಾಗಿದೆ.ಕಗ್ಗದಾಸಪುರದ ಮುಖ್ಯರಸ್ತೆಯಲ್ಲಿ ಸೋರಿಕೆಯಾಗುತ್ತಿದ್ದ ಮ್ಯಾನ್‌ವೋಲ್ ದುರಸ್ತಿ ಮಾಡಲು ಮಧ್ಯರಾತ್ರಿ ೧ರ ವೇಳೆ ಓರ್ವ ಕೂಲಿ ಕಾರ್ಮಿಕದಾಗ ಈ ದುರ್ಘಟನೆ ಸಂಭವಿಸಿದೆ..

ಮ್ಯಾನ್‌ಹೋಲ್ ಇಳಿದ ಕೆಲ ಹೊತ್ತಿನಲ್ಲಿ ಊಸಿರುಗಟ್ಟಿ ಒದ್ದಾಡುತ್ತಿದ್ದದ್ದನ್ನು ಕಂಡ ಮತ್ತೊಬ್ಬ  ಕಾರ್ಮಿಕ ಆತನ ರಕ್ಷಣೆ ಮಾಡಲು ಗುಂಡಿಗಿಳಿದಿದ್ದು ಆತ ಕೂಡ ಉಸಿರುಗಟ್ಟಿ ರಕ್ಷಣೆಗಾಗಿ ಕೂಗಿಕೊಂಡಿದ್ದು ತಕ್ಷಣ ಅವರ ಸಹಾಯಕ್ಕೆ ಧಾವಿಸಿದ ವಾಹನ ಚಾಲಕ ಹಗ್ಗದ ಸಹಾಯದಿಂದ ಒಳಗೆ ಇಳಿದಿದ್ದು ಆತ ಸೇರಿದಂತೆ ಮೂವರು ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದಾರೆ.

ಸ್ಥಳಿಯರು ಗಲಾಟೆ ಕೇಳಿ ಅಲ್ಲಿಗೆ ಧಾವಿಸಿ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯುವಷ್ಟ್ಟರಲ್ಲಿ ಓರ್ವ ಮೃತಪಟ್ಟಿದ್ದು ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ

ದುರಸ್ತಿಗಾಗಿ ಮ್ಯಾನ್ ಹೋಲ್‌ಗೆ ಇಳಿದಿದ್ದ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಒದಗಿಸದಿರುವುದು, ೧೫ ಅಡಿ ಆಳದ ಮ್ಯಾನ್ ಹೋಲ್‌ಗೆ ಇಳಿಯುವವರಿಗೆ ಆಮ್ಲಜನಕ ನೀಡದೇ ನಿರ್ಲಕ್ಷ್ಯ ವಹಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬೈಯಪ್ಪನಹಳ್ಳಿ ಪೊಲೀಸರು ಪರಿಹಾರ ಕಾರ್ಯ ಕೈಗೊಂಡಿದ್ದಾರೆ

loading...

No comments