ಏರ್‍ಟೆಲ್‍ನಿಂದ 345 ರೂ.ಗೆ 28 ಜಿಬಿ ಡೇಟಾ
ಮುಂಬೈ: ರಿಲಯನ್ಸ್ ಜಿಯೋ ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಏರ್‍ಟೆಲ್ 345 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 28 ಜಿಬಿ ಡೇಟಾ ನೀಡುವ ಹೊಸ ಆಫರ್ ಪ್ರಕಟಿಸಿದೆ.
ಜಿಯೋದ 303 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ಕಾಲ 28 ಜಿಬಿ ನೀಡುವ ಆಫರ್‍ಗೆ ಪ್ರತಿಯಾಗಿ ಏರ್‍ಟೆಲ್ 345 ರೂ.ಗೆ 28 ಜಿಬಿ(ದಿನಕ್ಕೆ ಗರಿಷ್ಟ 1 ಜಿಬಿ) ನೀಡುವ ಆಫರ್ ಪ್ರಕಟಿಸಿದೆ. ಈ ಆಫರ್‍ನಲ್ಲಿ ಸ್ಥಳಿಯ ಕರೆಗಳು ಮತ್ತು ಎಸ್‍ಟಿಡಿ ಕರೆಗಳು ಉಚಿತ ಎಂದು ತಿಳಿಸಿದೆ.
ಜಿಯೋದಲ್ಲಿ ಇದ್ದಂತೆ ಏರ್‍ಟೆಲ್‍ನಲ್ಲಿ ದಿನಕ್ಕೆ ಒಂದು ಜಿಬಿ ಸಂಪೂರ್ಣವಾಗಿ ಒಂದೇ ಬಾರಿಗೆ ಸಿಗುವುದಿಲ್ಲ. ಇದಕ್ಕೆ ನಿರ್ಬಂಧವಿದ್ದು, ಬೆಳಗಿನ ಅವಧಿಯಲ್ಲಿ 500 ಎಂಬಿ ಮತ್ತು ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ 500 ಎಂಬಿ ಡೇಟಾ ಬಳಸಬಹುದಾಗಿದೆ.
ಏರ್‍ಟೆಲ್‍ನಲ್ಲಿ ಯಾವುದೇ ನಿರ್ಬಂಧ ಇಲ್ಲದೇ ಒಂದು ದಿನಕ್ಕೆ ಗರಿಷ್ಟ 1ಜಿಬಿ ಡೇಟಾ ಬೇಕಾದರೆ ನೀವು 549 ರೂ. ರಿಚಾರ್ಜ್ ಮಾಡಬೇಕಾಗುತ್ತದೆ.
loading...
No comments