Breaking News

ಬೊಜ್ಜು ಹೊಟ್ಟೆ ಕರಗಿಸುವ 5 ಗಿಡಮೂಲಿಕೆಗಳು


ಗೋಧಿ ಹುಲ್ಲು:
ಜ್ಯೂಸ್ ನಂತೆ ಕುಡಿಯಬಹುದಾದ ಈ ಗೋಧಿ ಹುಲ್ಲಿನ ರಸದಲ್ಲಿ ಅಧಿಕವಾದ ನಾರಿನಂಶವಿದೆ. ಈ ನಾರಿನಂಶ ದೇಹದಲ್ಲಿ ಬೊಜ್ಜು ಮನೆಮಾಡದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೂಡ ಇದೆ. ಪಾಲಾಕ್ ಸೊಪ್ಪು ಮತ್ತು ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.

ಕೆಂಪು ಮೆಣಸಿನಕಾಯಿ:
ಕೆಂಪು ಮೆಣಸಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕುಗೊಳ್ಳುವುದಲ್ಲದೆ ದೇಹದಲ್ಲಿ ಶಕ್ತಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಬೊಜ್ಜು ಕರಗಿಸುವಲ್ಲಿಯೂ ಹೆಚ್ಚು ಶಕ್ತಿಯುತವಾಗಿರುವ ಮೆಣಸಿನಕಾಯಿಯನ್ನು ನಿಯಂತ್ರಿತ ಮಟ್ಟದಲ್ಲಿ ಸೇವಿಸಬೇಕು. ಇಲ್ಲವೆಂದರೆ ಹೊಟ್ಟೆಯಲ್ಲಿ ಉರಿಯೂ ಉಂಟಾಗುತ್ತದೆ.

ಕಹಿ ಹುಳಿ ಅಥವಾ ಕಹಿ ನಿಂಬೆಹಣ್ಣು:
ಕಹಿ ಕಿತ್ತಳೆ ನೈಸರ್ಗಿಕವಾಗಿ ದೇಹದ ತೂಕ ಇಳಿಸುತ್ತದೆ. ಇದು ದೇಹದ ಅನೇಕ ಭಾಗದಲ್ಲಿ ಅಧಿಕವಾಗಿ ತುಂಬಿಕೊಂಡ ಬೊಜ್ಜನ್ನು ಕ್ರಮೇಣ ಕರಗಿಸುತ್ತದೆ. ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೂ ಕಹಿ ಕಿತ್ತಳೆ ಸೇವನೆ ಒಳ್ಳೆಯದು. ಪಿತ್ತ ನಿವಾರಿಸುತ್ತದೆ.

ಗ್ರೀನ್ ಟೀ:
ಗ್ರೀನ್ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಪರಿಣಾಮಕಾರಿಯಾಗಿ ಸಾಧ್ಯವಿದೆ. ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿದರೆ ಟೀಯಲ್ಲಿನ ಆಂಟಿಯಾಕ್ಸಿಡಂಟ್ ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.

ಹೆಸರು ಕಾಳು: ಮೊಳಕೆ ಬರಿಸಿದ ಹೆಸರುಕಾಳಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಹಾಗೂ ಅನೇಕ ಖನಿಜಾಂಶಗಳಿರುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣದಂಶ, ಅಧಿಕ ನಾರಿನಂಶ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡಲು ಸಹಕಾರಿ. ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡುವಲ್ಲಿ ಅನುಕೂಲಕರ.

ಎಲೆಕೋಸು: ಎಲೆಕೋಸನ್ನು ಹಸಿಯಾಗಿ ತಿಂದರೆ ತೂಕ ಕಡಿಮೆಯಾಗಲು ತುಂಬಾ ಸಹಕಾರಿ. ಎಲೆಕೋಸಿನಿಂದ ತಯಾರಿಸಿದ ಅಡುಗೆ ಪದಾರ್ಥಗಳ ಸೇವನೆ ಒಳ್ಳೆಯದು.

ಜೇನು: ಬೆಳಗ್ಗಿನ ಜಾವ ಒಂದು ಚಮಚ ಜೇನನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು. ಇತ್ತೀಚೆಗೆ ಹಲವರು ವಾಟರ್ ಅಥವಾ ಹನಿ ಥೆರಪಿ ಅಂತ ಇದನ್ನು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ.

ಕರಿಬೇವಿನ ಎಲೆ: ಕರಿ ಬೇವಿನ ಎಲೆ ಪ್ರತಿದಿನ ತಿನ್ನುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುತ್ತೆ. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ, ಅಧಿಕ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತೆ. ಸ್ವಲ್ಪ ಗುಂಡಗೆ ಇರುವವರು ಪ್ರತಿ ಹೊತ್ತಿನ ಊಟದ ಜೊತೆ 5-6 ಕರಿಬೇವಿನ ಎಲೆ ತಿನ್ನುತ್ತಾ ಬಂದರೆ ಸಮತೂಕವನ್ನು ಪಡೆಯಬಹುದು. ಆದ್ರೆ, ಬಹುತೇಕ ಮಂದಿ ವಗ್ಗರಣೆ ಹಾಕಿದ ಕರಿಬೇವನ್ನು ತಿನ್ನೋದೇ ಇಲ್ಲ. ಆರೋಗ್ಯದ ದಷ್ಟಿಯಿಂದ ತಿಂದರೆ ಒಳ್ಳೆಯದು.

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಗಂಧಕದ ಅಂಶ ಹೆಚ್ಚಾಗಿರುವುದರಿಂದ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ.

ಅರಿಶಿಣ: ಒಂದು ಚಿಕ್ಕ ತುಂಡು ಅರಿಶಿಣವನ್ನು ದಿನಾ ತಿಂದರೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುತ್ತಾ ಬಂದರೆ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಸಂಚಲನ ಸರಾಗವಾಗಿ ನಡೆಯಲು ತುಂಬಾ ಸಹಕಾರಿಯಾಗಿದೆ.

ಚಕ್ಕೆ: ಚಕ್ಕೆ ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ ಪರಿಣಾಮಕಾರಿ. ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಹಸಿಮೆಣಸಿನ ಕಾಯಿ: ಮೆಣಸಿನಕಾಯಿ ತಿಂದರೆ ಕೊಬ್ಬು ಕರಗಿಸಲು ಸಹಕಾರಿಯಾಗಿದೆ, ತುಂಬಾ ಸಪ್ಪೆ ಊಟ ಮಾಡಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ, ತುಂಬಾ ಖಾರದ ಊಟ ಕೂಡ ಸರಿಯಲ್ಲ.

ಸಾಸಿವೆ ಎಣ್ಣೆ: ಅಡುಗೆಗೆ ಸಾಸಿವೆ ಎಣ್ಣೆ ಬಳಸುವುದು ಒಳ್ಳೆಯದು. ಇದರಲ್ಲಿ antioxidants ಅಂಶ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.


ಮಜ್ಜಿಗೆ: ಮಜ್ಜಿಗೆಯಲ್ಲಿ ಅಧಿಕ ಕೊಬ್ಬಿನಂಶವಿರುವುದಿಲ್ಲ. ಇದನ್ನು ಪ್ರತಿನಿತ್ಯ ಸೇವಿಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶದ ಜತೆ ಸಮತೂಕದ ಮೈಕಟ್ಟು ಪಡೆಯಬಹುದು. ಟೀ, ಕಾಫಿ ಬದಲಿಗೆ ಮಜ್ಜಿಗೆ ಕುಡಿದರೆ ಇನ್ನೂ ಒಳ್ಳೆಯದು.

1. ಎರಡು ಚಮಚ ಜೇನನ್ನು ಹರ್ಬಲ್ ಅಥವಾ ಗ್ರೀನ್ ಟೀ ಹಾಕಿ ಕುಡಿಯುವುದು ಒಳ್ಳೆಯದು. ಹರ್ಬಲ್ ಅಥವಾ ಗ್ರೀನಾ ಟೀಗೆ ಹಾಕಿ ಕುಡಿದರೆ ದೇಹದಲ್ಲಿರುವ ಅಧಿಕ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

2. ಅಡುಗೆಯಲ್ಲಿ ಬೆಳ್ಳುಳ್ಳಿ, ಚಕ್ಕೆ, ಲವಂಗ ಬಳಸುವುದು ಒಳ್ಳೆಯದು.

3. ಮಧ್ಯಾಹ್ನ ಹೊತ್ತು ಮಲಗುವ ಅಭ್ಯಾಸ ಒಳ್ಳೆಯದಲ್ಲ. ಮಧ್ಯಾಹ್ನ ನಿದ್ದೆ ಬರುತ್ತಿದ್ದರೆ ಸ್ವಲ್ಪ ಹೊತ್ತು ನಡೆದಾಡಬೇಕು. ಆಗ ನಿದ್ದೆ ಬರುವುದಿಲ್ಲ. ಇದರಿಂದ ಮೈಭಾರ ಹೆಚ್ಚುವುದನ್ನು ತಡೆಯಬಹುದು.

4. ಹೊಟ್ಟೆ ಮತ್ತು ಸೊಂಟಕ್ಕೆ ಲವಣ ತೈಲ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಈ ಲವಣ ತೈಲ ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

5. ಅಧಿಕ ಉಪ್ಪು, ಕೊಬ್ಬಿನ ಪದಾರ್ಥಗಳು, ಐಸ್ ಕ್ರೀಮ್, ಕುರುಕಲು ತಿಂಡಿಗಳು ಇವುಗಳನ್ನು ಮಿತಿಮೀರಿ ತಿನ್ನಲು ಹೋಗಬಾರದು. ಅಧಿಕ ನೀರು ಕುಡಿಯುವುದು ಒಳ್ಳೆಯದು.

6. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿನೀರನ್ನು ಕುಡಿದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.

7. ವರಡಿ (Varadi) ಎಂಬ ಟಾನಿಕ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ 15ml ನಂತೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ತೆಗೆದುಕೊಳ್ಳಬೇಕು. ಇದನ್ನು ಕುಡಿದ ನಂತರ 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.

8. ಹುರುಳಿಕಾಳನ್ನು ಪುಡಿ ಮಾಡಿ ಮೊಸರಿನ ಜೊತೆ ಮಿಶ್ರ ಮಾಡಿ ಹೊಟ್ಟೆ ಮತ್ತು ಸೊಂಟದ ಸುತ್ತ ಹಚ್ಚಿ , ಹಚ್ಚುವಾಗ ಮೇಲ್ಮುಖವಾಗಿ ಹಚ್ಚಿ, ಅರ್ಧ ಗಂಟೆಯ ಬಳಿಕ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಾ ಬಂದರೆ ಸೊಂಟದ ಸುತ್ತಳತೆ ಕಡಿಮೆಯಾಗವುದು.

9. ಹುರುಳಿಕಾಳು, ಹೆಸರುಕಾಳು, ಗೋಧಿ ಇವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದು.


10. ಕಾರ್ಬೋಹೈಡ್ರೇಟ್ ಆಹಾರ ಮತ್ತು ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು. ಅಧಿಕ ಕೊಬ್ಬಿನಂಶವಿರುವ ಮಾಂಸವನ್ನು ತಿನ್ನಬಾರದು. ಮೀನು, ವಾರಕ್ಕೊಮ್ಮೆ ಸ್ಕಿನ್ ಲೆಸ್ ಚಿಕನ್ ತಿನ್ನಬಹುದು. ಪ್ರತಿನಿತ್ಯ 30 ನಿಮಿಷ ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರಕ್ರಮ ಪಾಲಿಸಬೇಕು. ಈ ರೀತಿ ಮಾಡಿದ್ದೇ ಆದರೆ ಬೊಜ್ಜು ಬರುವುದಿಲ್ಲ ಮತ್ತು ಗಟ್ಟಿಮುಟ್ಟಾಗಿ ಇರಬಹುದು.

loading...

No comments