Breaking News

ದಕ್ಷಿಣ ಕನ್ನಡ ,ಉಡುಪಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನಿಜವೇ ?

ಮಂಗಳೂರು : ವಿಧಾನ ಸಭಾ ಚುನಾವಣೆಗೆ ಇನ್ನೇನು ಸರಿ ಸುಮಾರು ಒಂದು ವರ್ಷ ಇರುವಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ ಅದರಲ್ಲೂ ಬಿಜೆಪಿ ಪಾಳಯದಲ್ಲಿ ಟಿಕೆಟ್ ರೇಸ್ ನಲ್ಲಿ ಹಲವಾರು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ .ಇದೀಗ ವಾಟ್ಸ್ ಆಪ್,ಫೇಸ್ಬುಕ್ ,ನಲ್ಲಿ ದಕ್ಷಿಣ ಕನ್ನಡ ,ಉಡುಪಿ  ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದು ಹರಿದಾಡುತ್ತಿದ್ದು ಇದು ಬಿಜೆಪಿ ಕಾರ್ಯಕರ್ತರಲ್ಲಿ ಹಲವು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವಾಟ್ಸ್ ಆಪ್,ಫೇಸ್ಬುಕ್ ,ನಲ್ಲಿ ಹರಿದಾಡುತಿರುವ  ಸುದ್ದಿ :

(2018 ಕರ್ನಾಟಕ  ವಿಧಾನ ಸಭಾ ಚುನಾವಣೆಗೆ ಬಿ.ಜೆ.ಪಿ ಕೋರ್ ಕಮಿಟಿಯಲ್ಲಿ  ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಿಗೆ ಮತ್ತು ದಕ್ಷಿಣ ಕನ್ನಡದ 3 ವಿಧಾನ ಸಭಾ ಕ್ಷೇತ್ರಗಳಿಗೆ  ಆಯ್ಕೆಯಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ :
  1. ಕಾಪು ವಿಧಾನ ಸಭಾ ಕ್ಷೇತ್ರ‌: ಶ್ರೀ ಗುರ್ಮೆ ಸುರೇಶ್ ಶೆಟ್ಟಿ .
  2. ಉಡುಪಿ ವಿಧಾನ ಸಭಾ ಕ್ಷೇತ್ರ ;ಶ್ರೀ ಉದಯ ಕುಮಾರ್ ಶೆಟ್ಟಿ
  3. ಕುಂದಾಪುರ ವಿಧಾನ ಸಭಾ ಕ್ಷೇತ್ರ; ಶ್ರೀ ಶ್ರೀನಿವಾಸ ಶೆಟ್ಟಿ ,ಹಾಲಾಡಿ
  4. ಬೈಂದೂರು ವಿಧಾನ ಸಭಾ ಕ್ಷೇತ್ರ : ಶ್ರೀ ಜಯಪ್ರಕಾಶ ಹೆಗ್ಡೆ 
  5. ಕಾರ್ಕಳ ವಿಧಾನ ಸಭಾ ಕ್ಷೇತ್ರ : ಶ್ರೀ ಸುನೀಲ್ ಕುಮಾರ್
  6. ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ : ಶ್ರೀ ಜಗದೀಶ್ ಅಧಿಕಾರಿ
  7. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ;  ಶ್ರೀ ಉಳಿಪಾಡಿ ರಾಜೇಶ್ ನಾಯ್ಕ್ 
  8. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ :  ಶ್ರೀ ಹರೀಶ್ ಪೂಂಜ 
ಇವರೆಲ್ಲರಿಗೂ ತತ್‌ ಕ್ಷಣದಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷವನ್ನು ಸಂಘಟನೆ ಮಾಡಬೇಕೆಂಬ ಸೂಚನೆಯನ್ನು  ಉಡುಪಿ ಹಾಗೂ ದ.ಕ.ಜಿಲ್ಲೆಯ *RSS ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ರವರ ಮೂಲಕ ತಿಳಿಸಲಾಗಿದೆ* .   ಹಾಗೂ  ಬಿ.ಜೆ.ಪಿ ಯ ಇತರ ಟಿಕೆಟ್ ಆಕಾಂಕ್ಷಿಗಳು (ಟಿಕೆಟ್ ವಂಚಿತರು ) ಬೇರೆ ಪಕ್ಷದತ್ತ ಗಮನ ಹರಿಸದಂತೆ ಎಚ್ಚರ ವಹಿಸುವಂತೆ ಕೂಡ  *ಕಲ್ಲಡ್ಕ ಡಾ// ಪ್ರಭಾಕರ್ ಭಟ್ರ ಅವರಿಗೆ ಸೂಚಿಸಲಾಗಿದೆ*. ಜೈ ಹಿಂದುತ್ವ ಜೈ ಬಿ.ಜೆ.ಪಿ )
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ನಿಟ್ಟಿನಲ್ಲಿ ಇಂತ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಿಯಬಿಟ್ಟಿದ್ದಾರೆ ,ಜಿಲ್ಲೆಯ ಯಾವುದೇ ಅಭ್ಯರ್ಥಿಗಳ ಪಟ್ಟಿ ತಯಾರಾಗಿಲ್ಲ ಈ ಬಗ್ಗೆ ಯಾವುದೇ ಕೋರ್ ಕಮಿಟಿ ಸಭೆ ನಡೆದಿಲ್ಲ ಎಂದು ರಾಜ್ಯ ಬಿಜೆಪಿಯ ಬಲ್ಲ ಮೂಲಗಳಿಂದ ಸುದ್ದಿ 24x7 ಮಾಹಿತಿ ಲಭಿಸಿರುತ್ತದೆ . ಅದಲ್ಲದೆ  ಈ ಬಗ್ಗೆ ಸಂಘ ಪರಿವಾರದ ಹಿರಿಯ ಮುಖಂಡರು ಕೂಡ  ಈ ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ .ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಲ ಅಸಂತುಷ್ಟರು ಈ ರೀತಿಯ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ .ಜಾತಿ ಜಾತಿಗಳ ನಡುವೆ ಬಿರುಕು ಮೂಡಿಸುವುದೇ ಈ ಕಿಡಿಗೇಡಿಗಳ ಕೆಲಸ ಎಂದು  ಅವರು ಕಿಡಿ ಕಾರಿದ್ದಾರೆ.
loading...

No comments