ಮಾ 8ಕ್ಕೆ ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆ
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಹೆಗ್ಡೆ ಮಾರ್ಚ್ 8ರಂದು ಬಿಜೆಪಿ ಸೇರಿಕೊಳ್ಳುವ ಸಾಧ್ಯತೆ ಇದೆ. “ನನಗೆ ಬಿಜೆಪಿಯಿಂದ ಆಹ್ವಾನ ಪತ್ರ ಬಂದಿದೆ. ಆದರೆ ನಾನು ಪಕ್ಷಾಂತರಗೊಳ್ಳುವ ಮುನ್ನ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ನಿಲುವೊಂದಕ್ಕೆ ಬರುವೆ ಮತ್ತು ಆ ಬಗ್ಗೆ ಒಂದೆರಡು ದಿನದಲ್ಲಿ ಅಧಿಕೃತ ಪ್ರಕಟಣೆ ನೀಡುವೆ” ಎಂದು ಹೆಗ್ಡೆ ತಿಳಿಸಿದರು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಕರಾವಳಿ ಭಾಗದ ಬಂಟರ ಮತ ಗಳಿಸುವ ಯೋಜನೆ ಇಟ್ಟುಕೊಂಡೇ ಬಿಜೆಪಿ ಹೆಗ್ಡೆಗೆ ಮಣೆ ಹಾಕಲು ಮನಸ್ಸು ಮಾಡಿದೆ ಎಂದು ಪಕ್ಷ ಮೂಲಗಳು ಹೇಳಿವೆ.
loading...
No comments