ಕೇಂದ್ರದಿಂದ ಮದ್ರಸಾಗಳಲ್ಲಿ ‘3ಟಿ ಫಾರ್ಮಲಾ ಅನುಷ್ಠಾನ
ನವದೆಹಲಿ: ದೇಶದಾದ್ಯಂತ ಇರುವ ಸಾಂಪ್ರದಾಯಿಕ ಕಲಿಕಾ ಕೇಂದ್ರಗಳಾದ ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯಗಳನ್ನು ನಿರ್ಮಿಸುವುದಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಶೌಚಾಲಯಗಳ ಜತೆಗೆ ಸಾಂಪ್ರದಾಯಿಕ ಕಲಿಕಾ ಕೇಂದ್ರಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಲಾಗಿದೆ.
ದೇಶಾದ್ಯಂತ ಮದ್ರಸಾಗಳಲ್ಲಿ ‘3ಟಿ' (ಟಿ-ಟೀಚರ್ಸ್, ಟಿಫನ್, ಟಾಯ್ಲೆಟ್) ಫಾರ್ಮಲಾ ಅನುಷ್ಠಾನ ಗೊಳಿಸಲಾಗುವುದು. ಸ್ವಚ್ಛ ಭಾರತ ಅಭಿಯಾನದಡಿ ಮುಂದಿನ ಆರ್ಥಿಕ ವರ್ಷದ ಅಂತ್ಯದೊಳಗೆ ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯ ನಿರ್ಮಿಸಲಾಗುವುದೆಂದಿದ್ದಾರೆ.
-suvarana news
loading...
No comments