ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಯ ಬಂಧನ
ಜೈಪುರ: ಎರಡೂವರೆ ತಿಂಗಳ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ರಾಜಸ್ತಾನದ ಪ್ರತಾಪ್‌ನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ನೆರೆಮನೆಯ ನಾಥು ಲಾಲ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಇಕ್ಬಾಲ್ ಎಂಬುವನನ್ನು ಬಂಧಿಸಲಾಗಿದೆ.
ಗುರುವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯು ಕರುವಿನ ಜತೆ ಲೈಂಗಿಕ ಕ್ರಿಯೆ ನಡೆಸಿದ್ದನ್ನು ನೋಡಿರುವುದಾಗಿ ನಾಥು ಲಾಲ್ ತಿಳಿಸಿದ್ದಾರೆ ಎಂದು ಪ್ರತಾಪ್‌ನಗರ ಪೊಲೀಸ್ ಠಾಣಾಧಿಕಾರಿ ರಶ್‌ಪಾಲ್ ಸಿಂಗ್ ಅವರು ಹೇಳಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆಯ 377ನೇ ವಿಧಿ (ಪ್ರಕೃತಿಗೆ ವಿರುದ್ಧವಾಗಿ ಯಾವುದೇ ಮಹಿಳೆ, ಮನುಷ್ಯ ಅಥವಾ ಪ್ರಾಣಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪ) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರುವಿನ ರೋದನ ಕೇಳಿ ಸಂಶಯ ಉಂಟಾದ್ದರಿಂದ ಅದನ್ನು ಕಟ್ಟಿಹಾಕಿದ ಜಾಗಕ್ಕೆ ಹೋಗಿ ನೋಡಿದೆ. ಆಗ ಅದಕ್ಕೆ ರಕ್ತಸ್ರಾವವಾಗುತ್ತಿತ್ತು. ಇಕ್ಬಾಲ್ ತನ್ನ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ದೂರುದಾರ ನಾಥು ಲಾಲ್ ತಿಳಿಸಿದ್ದಾರೆ.
-prajavani
loading...
No comments