Breaking News

ಬೆಳ್ಳಿ ಹಸುವಿನ ಮೂರ್ತಿಯ ಗಿಫ್ಟ್ ಬೇಡ ಎಂದ ಸಿಎಂ



ಕಲಬುರಗಿ: ಉತ್ತಮ ಬಜೆಟ್‍ಗಾಗಿ ಸಚಿವ ರಾಯರೆಡ್ಡಿ ಮತ್ತು ಗುಲಬರ್ಗಾ ವಿವಿ ಉಡುಗೊರೆಯಾಗಿ ನೀಡಿದ ಬೆಳ್ಳಿ ಹಸುವಿನ ಮೂರ್ತಿಯನ್ನು ಸಿಎಂ ನಿರಾಕರಿಸಿದ್ದಾರೆ.ನಗರದ ವಿಶ್ವವಿದ್ಯಾಲಯದ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಉತ್ತಮ ಬಜೆಟ್‍ಗಾಗಿ ರೆಡ್ಡಿ ಸಮಾಜದ ವತಿಯಿಂದ ಸಿದ್ದರಾಮಯ್ಯ ಅವರಿಗೆ ಚಿನ್ನದ ಪದಕ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿವಿ ವತಿಯಿಂದ ಬೆಳ್ಳಿ ಆಕಳು ಮೂರ್ತಿಯನ್ನು ಸಿದ್ದರಾಮಯ್ಯರಿಗೆ ನೀಡಿ ಗೌರವಿಸಲಾಯಿತ್ತು.ನಂತರ ಭಾಷಣದಲ್ಲಿ ಮಾತನಾಡಿದ ಸಿಎಂ, ಗಿಫ್ಟ್ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಈ ಹಿಂದೆ ಸ್ನೇಹಿತ ನೀಡಿದ ವಾಚ್ ಪ್ರಕರಣದಿಂದ ದೊಡ್ಡ ಅಪಪ್ರಚಾರವಾಯಿತು. ಹೀಗಾಗಿ ಇಲ್ಲಿ ನೀಡಿರುವ ಪದಕ ಮತ್ತು ಬೆಳ್ಳಿ ಮೂರ್ತಿಯನ್ನು ವಿವಿಗೇ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಗಿಫ್ಟ್ ಗಳನ್ನು ಸ್ವೀಕರಿಸುವದಿಲ್ಲ ಅಂತಾ ಹೇಳಿದ್ರು.
-public tv

loading...

No comments