ಮ್ಯಾಕ್ ಡೊನಾಲ್ಡ್‌ನಲ್ಲಿ ಕೋಕಾ ಕೋಲಾ ಝೀರೊಗೆ ಬ್ಯಾನ್
ಮುಂಬಯಿ: ಮೆಕ್‌ಡೊನಾಲ್ಡ್‌ನ 60 ಮಳಿಗೆಗಳಲ್ಲಿ ಕೋಕಾ ಕೋಲಾ ಝೀರೊ ಮಾರಾಟವನ್ನು ಮಹಾರಾಷ್ಟ್ರ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ)ನಿಷೇಧಿಸಿದೆ.
ಕೋಕಾಕೋಲಾ ಝೀರೊದಲ್ಲಿ ಕೃತಕ ಸಿಹಿಕಾರಕವಿದ್ದು, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಕಂಪೆನಿಯು ಈ ಮೂಲಕ ಆಹಾರ ಸುರಕ್ಷೆ ಮತ್ತು ಗುಣಮಟ್ಟ ನಿಯಂತ್ರಣ ನಿಯಮ ಉಲ್ಲಂಘಿಸಿರುವುದಕ್ಕೆ ಎಫ್‌ಡಿಎ ನಿಷೇಧ ಹೇರಿದೆ.
ಕೊಲ್ಲಾಪುರದಲ್ಲಿ ಅಧಿಕಾರಿಯೊಬ್ಬರು ಈ ಪೇಯದಲ್ಲಿ ಸ್ಥೂಲಕಾಯ, ಇನ್ಸುಲಿನ್ ಪ್ರತಿರೋಧಕ, ರಕ್ತದೊತ್ತಡ ಸಮಸ್ಯೆಗಳಿಗೆ ಕಾರಣವಾಗಬಲ್ಲ ಎರಡು ಸಿಹಿಕಾರಕ ಅಂಶಗಳನ್ನು ಪತ್ತೆಹಚ್ಚಿದ ಬಳಿಕ ನಿಷೇಧ ವಿಧಿಸಲಾಗಿದೆ.
vk
loading...
No comments